IRCON ಸಂಸ್ಥೆಯಲ್ಲಿ 76 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಜನವರಿ 30: ಇಂಜಿನಿಯರಿಂಗ್ ಹಾಗೂ ನಿರ್ಮಾಣ ಸಂಸ್ಥೆ IRCON ಲಿಮಿಟೆಡ್ 2020ನೇ ಸಾಲಿನ ನೇಮಕಾತಿ ನಡೆಸುತ್ತಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 15ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Ircon International Limited (IRCON)
ಹುದ್ದೆ ಹೆಸರು: ಅಪ್ರೆಂಟಿಸ್
ಒಟ್ಟು ಹುದ್ದೆ: 76
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15.02.2020
ವಿದ್ಯಾರ್ಹತೆ:
ಪದವಿ ಅಪ್ರೆಂಟಿಸ್: ಎಐಸಿಟಿಇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಜಿನಿಯರಿಂಗ್/ ತಂತ್ರಜ್ಞಾನ ವಿಷಯದಲ್ಲಿ ಪದವಿ.

ತಾಂತ್ರಿಕ(ಡಿಪ್ಲೋಮಾ) ಅಪ್ರೆಂಟಿಸ್: ಎಐಸಿಟಿಇ, ತಾಂತ್ರಿಕ ಮಹಾವಿದ್ಯಾಲಯದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಜಿನಿಯರಿಂಗ್/ ತಂತ್ರಜ್ಞಾನ ವಿಷಯದಲ್ಲಿ ಡಿಪ್ಲೋಮಾ.
ವಯೋಮಿತಿ:
ಕನಿಷ್ಠ: 18 ವರ್ಷ.
ಗರಿಷ್ಠ: 30 ವರ್ಷ.
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ
ನೇಮಕಾತಿ: ಆಯ್ಕೆಯಾದ ಅಭ್ಯರ್ಥಿಗಳ ಆದ್ಯತಾ ಪಟ್ಟಿ ಮೇರೆಗೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15.02. 2020.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ











Click it and Unblock the Notifications