Jobs: ಪ್ರಸಾರ ಭಾರತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಜನವರಿ 18: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಪನ್ಮೂಲ ವ್ಯಕ್ತಿ, ವಿಡಿಯೋ ಪರ್ಸನ್, ವಿಡಿಯೋ ಅಸಿಸ್ಟೆಂಟ್, ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್, ಜನರಲ್ ಅಸಿಸ್ಟೆಂಟ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ prasarbharati.gov.in ಗೆ ಭೇಟಿ ನೀಡಬಹುದಾಗಿದ್ದು, ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಪ್ರಸಾರ ಭಾರತಿಯ ಹುದ್ದೆಯ ಕುರಿತು ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯಬೇಕು. ಈ ಎಲ್ಲದರ ಕುರಿತಾಗಿ ಮಾಹಿತಿ ಇಲ್ಲಿದೆ.

* ಹುದ್ದೆಗಳ ಹೆಸರು: ಸಂಪನ್ಮೂಲ ವ್ಯಕ್ತಿ, ವಿಡಿಯೋ ಎಡಿಟರ್, ವಿಡಿಯೋ ಅಸಿಸ್ಟೆಂಟ್, ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್, ಜನರಲ್ ಅಸಿಸ್ಟೆಂಟ್
* ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
* ವೇತನ: ನಿಯಮಾನುಸಾರ
* ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 31, 2022
ವಿದ್ಯಾರ್ಹತೆ ಮತ್ತು ಮಾನದಂಡಗಳು
ಸಂಪನ್ಮೂಲ ವ್ಯಕ್ತಿ ಹುದ್ದೆಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪತ್ರಿಕೋದ್ಯಮ ಮತ್ತು ಸಮೂಹ/ ಟಿವಿ ಮತ್ತು ರೇಡಿಯೊದಲ್ಲಿ ಪದವಿ/ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಿಡಿಯೋ ಅಸಿಸ್ಟೆಂಟ್ ಹುದ್ದೆಗೆ: ಮಾನ್ಯತೆ ಪಡೆದ ಮಂಡಳಿಯಿಂದ 10+2, ಪಿಯುಸಿ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿನಿಮಾಟೋಗ್ರಫಿ/ ವೀಡಿಯೋಗ್ರಫಿಯಲ್ಲಿ ಡಿಪ್ಲೊಮಾ/ ಪದವಿ ಪಡೆದಿರಬೇಕು.
ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್ ಹುದ್ದೆಗೆ: ಮಾನ್ಯತೆ ಪಡೆದ ಮಂಡಳಿಯಿಂದ 10+2, ಪಿಯುಸಿ, ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಚಲನಚಿತ್ರ ಮತ್ತು ವೀಡಿಯೊ ಸಂಕಲನದಲ್ಲಿ ಪದವಿ/ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಜನರಲ್ ಅಸಿಸ್ಟೆಂಟ್ ಹುದ್ದೆಗೆ- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಸಂಪನ್ಮೂಲ ವ್ಯಕ್ತಿ, ವಿಡಿಯೋ ಸಹಾಯಕ, ಜನರಲ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ 40 ವರ್ಷದೊಳಗಿರಬೇಕು.












Click it and Unblock the Notifications