ಧಾರವಾಡ; ವೈದ್ಯರ ನೇಮಕಾತಿಗೆ ನೇರ ಸಂದರ್ಶನ
ಧಾರವಾಡ, ಮೇ 19; ಧಾರವಾಡ ಜಿಲ್ಲಾಡಳಿತ ಕೋವಿಡ್ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಮಾಸಿಕ ಗೌರವಧನದ ಆಧಾರದ ಮೇಲೆ ವೈದ್ಯರ ಹುದ್ದೆಯನ್ನು ಭರ್ತಿ ಮಾಡುತ್ತಿದೆ.
ಒಟ್ಟು 25 ಹುದ್ದೆಗಳನ್ನು ಮಾಸಿಕ ಗೌರವ ಧನ ರೂ.15,000 ರೂ.ನಂತೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತರು ಮೇ 19 ಮತ್ತು 20ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಂದರ್ಶನ ಪ್ರಕ್ರಿಯೆಯು ಧಾರವಾಡ ಹಳೆ ಡಿ.ಎಸ್.ಪಿ. ಸರ್ಕಲ್ ಹತ್ತಿರ ಇರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಎಂ. ಬಿ. ಬಿ. ಎಸ್. ಅಂತಿಮ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳ ಜೊತೆ ಒಂದು ಸೆಟ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.

ಈ ನೇಮಕಾತಿ ತಾತ್ಕಾಲಿಕವಾಗಿ ಮಾತ್ರ ಗುತ್ತಿಗೆ ಆಧಾರದ ಮೇಲೆ ನಡೆಯಲ್ಲಿದ್ದು, ಖಾಯಂ ನೌಕರಿ ಆಗಿರುವುದಿಲ್ಲ. ನಿಯಮ ಮತ್ತು ಷರತ್ತುಗಳನ್ನು ಸಂದರ್ಶನದಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೇಮಕಾತಿಯಾದ ನಂತರ ಕಾರ್ಯನಿರ್ವಹಿಸುವ ಸ್ಥಳವನ್ನು ನಿರ್ಧರಿಸಲಾಗುತ್ತದೆ. ಗುತ್ತಿಗೆ ಅವಧಿಯು ಮೂರು ತಿಂಗಳಿಗಿದ್ದು, ಇನ್ನೂ ಮೂರು ತಿಂಗಳು ವಿಸ್ತರಿಸಬಹುದಾದ ಅವಧಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications