ಭಾರತೀಯ ನೌಕಾಪಡೆಯಲ್ಲಿ 400ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ
ಬೆಂಗಳೂರು, ಜುಲೈ 22: ಭಾರತೀಯ ಜಲ ಸೇನೆ(Indian Navy)ಯಲ್ಲಿ 20119ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 400ಕ್ಕೂ ಅಧಿಕ ನಾವಿಕ(sailor) ಹುದ್ದೆಗಳಿವೆ. ಹೊಸ ಬ್ಯಾಚಿಗೆ ಪ್ರವೇಶ ಬಯಸುವವರು ಆಗಸ್ಟ್ 01ರಿಂದ ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದು,
ಸಂಸ್ಥೆ ಹೆಸರು: ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು : ಅಂದಾಜು 400
ಹುದ್ದೆ ಹೆಸರು: Sailors
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್ 01, 2019.
ವಿದ್ಯಾರ್ಹತೆ : 10+2 ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಿತ ಹಾಗೂ ಭೌತಶಾಸ್ತ್ರ ಒಂದು ವಿಷಯವಾಗಿ ಓದಿರಬೇಕು. ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಕಲಿಕೆ ವಿಷಯದಲ್ಲಿರಬೇಕು.

ವಯೋಮಿತಿ: 01 ಏಪ್ರಿಲ್ 2000 ರಿಂದ 2003ರ ಮಾರ್ಚ್ 31ರ ಅವಧಿಯಲ್ಲಿ ಜನಿಸಿರಬೇಕು.
ಸಂಬಳ ನೀರಿಕ್ಷೆ: 14,600 ರು ಪ್ರತಿ ತಿಂಗಳು
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ : ಯಾವುದೇ ಶುಲ್ಕವಿಲ್ಲ
ಇತರೆ: 250 ರು
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾಗಬೇಕು.
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : 26.07.2019
ಆನ್ ಲೈನ್ ಸರ್ಜಿ ಸಲ್ಲಿಸಲು ಕೊನೆ ದಿನಾಂಕ: 01.08.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications