ಭಾರತೀಯ ನೌಕಾ ಪಡೆಯಲ್ಲಿ 2700 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ನವೆಂಬರ್ 06: ಭಾರತೀಯ ನೌಕಾ ಪಡೆ (Indian Navy)ಯಲ್ಲಿ 2019ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಹೊಸ ನೇಮಕಾತಿ ಬಗ್ಗೆ ಪ್ರಕಟಣೆ ಹೊರಡಿಸಿದೆ. ಸುಮಾರು 2700ಕ್ಕೂ ಅಧಿಕ ನಾವಿಕ(sailor) ಹುದ್ದೆಗಳಿವೆ. ಹೊಸ ಬ್ಯಾಚಿಗೆ ಪ್ರವೇಶ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 18ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದು,
ಸಂಸ್ಥೆ ಹೆಸರು: ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು: 2700
ಹುದ್ದೆ ಹೆಸರು: Sailors AA and SSR
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 18, 2019.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10+2 ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಿತ ಹಾಗೂ ಭೌತಶಾಸ್ತ್ರ ಒಂದು ವಿಷಯವಾಗಿ ಓದಿರಬೇಕು. ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಕಲಿಕೆ ವಿಷಯದಲ್ಲಿರಬೇಕು.

ವಯೋಮಿತಿ: 2000 ಅಗಸ್ಟ್ 01 ರಿಂದ ಜುಲೈ 31, 2003ರ ಅವಧಿಯಲ್ಲಿ ಜನಿಸಿದವರಾಗಬೇಕು.
ಸಂಬಳ ನೀರಿಕ್ಷೆ: 14,600 ರು ಪ್ರತಿ ತಿಂಗಳು
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ : ಯಾವುದೇ ಶುಲ್ಕವಿಲ್ಲ
ಸಾಮಾನ್ಯ/ ಒಬಿಸಿ: 215 ರು
ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾಗಬೇಕು.
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ: 04.11.2019
ಆನ್ ಲೈನ್ ಸರ್ಜಿ ಸಲ್ಲಿಸಲು ಕೊನೆ ದಿನಾಂಕ: 18.11.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications