ಭಾರತದಲ್ಲಿ ಮಹಿಳೆಯರ ಉದ್ಯೋಗಕ್ಕೆ ಆದ್ಯತೆ ನೀಡುವ ಟಾಪ್‌ 5 ರಾಜ್ಯಗಳಿವು: ಕರ್ನಾಟಕಸ ಸ್ಥಾನ ಏನು?

ಭಾರತದಲ್ಲಿ ಮಹಿಳೆಯರಿಗೆ ಅಚ್ಚುಮೆಚ್ಚಿನ ಉದ್ಯೋಗದಾತ ರಾಜ್ಯಗಳಾವುವು ಎಂಬುದು ಬಹುತೇಕ ಮಂದಿಯ ಪ್ರಶ್ನೆಯಾಗಿರುತ್ತದೆ. ಹಾಗಾದ್ರೆ, ಅವುಗಳು ಯಾವುವು ಹಾಗೂ ನಮ್ಮ ಕರ್ನಾಟಕ ಈ ಪಟ್ಟಿಯಲ್ಲಿದೆಯಾ ಎನ್ನುವ ಸಂಪೂರ್ಣ ಮಾಹಿತಿಯನ್ನು ಕಾರಣ ಸಹಿತ ಇಲ್ಲಿ ವಿವರಿಸಲಾಗಿದೆ ತಿಳಿಯಿರಿ.

ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ದೆಹಲಿ ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಮೆಚ್ಚಿನ ಉದ್ಯೋಗ ತಾಣಗಳಾಗಿ ಹೊರಹೊಮ್ಮಿವೆ ಎಂದು ಇಂಡಿಯಾ ಸಿಲ್ಕ್‌ ರಿಪೋರ್ಟ್‌ 2025 ತಿಳಿಸಿದೆ. ಈ ರಾಜ್ಯಗಳು ಬಲಿಷ್ಠ ಆರ್ಥಿಕ ಪರಿಸರ ಮತ್ತು ವೈವಿಧ್ಯಮಯಗಳನ್ನು ಒಳಗೊಂಡಿರುವ ಕಾರಣ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿವೆ. ಅದರಲ್ಲೂ ಇವುಗಳು ಮಹಿಳೆಯರ ಪ್ರಮುಖ ಉದ್ಯೋಗ ತಾಣಗಳಾಗಿವೆ ಅಂತಲೂ ವರದಿ ಆಗಿದೆ.

India Skills Report 2025 Highlights Preferred Work Destinations for Men and Women

ಇಂಡಿಯಾ ಸಿಲ್ಕ್‌ ರಿಪೋರ್ಟ್‌ 2025 ಪ್ರಕಾರ, ಪುರುಷರು ಶಕ್ತಿಶಾಲಿ ಕೈಗಾರಿಕಾ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಪ್ರಸಿದ್ಧವಾದ ಮಹಾರಾಷ್ಟ್ರ, ಕರ್ನಾಟಕ, ದೆಹಲಿಯ ಎನ್‌ಸಿಆರ್‌, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ರಾಜ್ಯಗಳು ಮಾಹಿತಿ ತಂತ್ರಜ್ಞಾನ, ಉತ್ಪಾದನಾ, ಹಣಕಾಸು ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿವೆ. ಆದ್ದರಿಂದ ಇವು ಪುರುಷ ಉದ್ಯೋಗಿಗಳ ಪ್ರಮುಖ ಉದ್ಯೋಗ ಸೃಷ್ಟಿ ತಾಣಗಳಾಗಿವೆ.

ಮಹಿಳೆಯರ ದೃಷ್ಟಿಯಿಂದ, ಆಯ್ಕೆ ಮಾಡಿದ ಮೆಚ್ಚಿನ ರಾಜ್ಯಗಳ ನಕ್ಷೆ ಸಮಾನವಾದದ್ದೇ ಆಗಿದ್ದು, ತುಸು ಹೆಚ್ಚು ವೈವಿಧ್ಯಮಯ ಪ್ರವೃತ್ತಿಯನ್ನು ತೋರಿಸುತ್ತದೆ. ಮಹಿಳಾ ವೃತ್ತಿಪರರಿಗೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ದೆಹಲಿ ರಾಜ್ಯಗಳು ಹೇಳಿ ಮಾಡಿಸಿದ ನೆಚ್ಚಿನ ಉದ್ಯೋಗ ತಾಣಗಳಾಗುವೆ. ಈ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು, ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗ ಅವಕಾಶಗಳು ಇವೆ. ಮತ್ತು ಈ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಸ್ಥಿರವಾಗಿ ಹೆಚ್ಚುತ್ತಲೇ ಬಂದಿದೆ.

ಪ್ರಗತಿಪರ ರಾಜ್ಯ ನೀತಿಗಳು, ಎಲ್ಲರನ್ನೂ ಒಳಗೊಂಡ ಕೆಲಸದ ಸ್ಥಳದ ಅನುಸರಣೆಗಳು ಮತ್ತು ಪರಿಣಾಮಕಾರಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಸಂಯೋಜನೆಯೇ ಈ ಬದಲಾವಣೆಗೆ ಕಾರಣ. ಇದರಿಂದ ಹೆಚ್ಚಿನ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಸೇರಿ ಉಳಿಯಲು ಪ್ರೇರೇಪಿತರಾಗಿದ್ದಾರೆ ಎಂದು ಎಂದು ತಜ್ಞರು ಹೇಳುತ್ತಾರೆ.

ಅದರಲ್ಲೂ ಕೇರಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಹೆಚ್ಚಿನ ಮಳೆಯರಿಗೆ ಉದ್ಯೋಗಾರ್ಹತಾ ಸೂಚ್ಯಂಕಗಳಿಗಾಗಿ ಗುರುತಿಸಿಕೊಂಡಿವೆ. ಇದಕ್ಕೆ ಕಾರಣ ಅಲ್ಲಿನ ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಕಾರ್ಯ ಸ್ಥಳಗಳಲ್ಲಿ ಯಾವುದೇ ಲಿಂಗ ಅಸಮಾನತೆ ಇರದಿರುವುದಾಗಿದೆ. ಇನ್ನು ಪ್ರಾದೇಶಿಕ ಆರ್ಥಿಕ ಶಕ್ತಿ, ಕ್ಷೇತ್ರ ವೈವಿಧ್ಯತೆ ಮತ್ತು ಕೇಂದ್ರೀಕೃತ ಕೌಶಲ್ಯ ಅಭಿವೃದ್ಧಿ ಪ್ರಯತ್ನಗಳು ಪುರುಷ ಮತ್ತು ಮಹಿಳೆಯರಿಗೆ ಉದ್ಯೋಗ ಆಕಾಂಕ್ಷೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದೆ.

ಮಹಿಳೆಯರ ಉದ್ಯೋಗಕ್ಕೆ ಆದ್ಯತೆ ನೀಡುವ ಟಾಪ್‌ 5 ರಾಜ್ಯಗಳು

* ಮಹಾರಾಷ್ಟ್ರ
* ತಮಿಳುನಾಡು
* ಕೇರಳ
* ಕರ್ನಾಟಕ
* ದೆಹಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+