Government Employees: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ
Government Employees: ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಆಗಾಗ ಗುಡ್ ನ್ಯೂಸ್‌ಗಳನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಸರ್ಕಾರಿ ನೌಕರರಿಗೆ ಗಳಿಕೆ ರಜೆ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೇರ್ಪಡೆ ಆದೇಶವನ್ನು ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 21.12.2023ರ ಸರ್ಕಾರಿ ಆದೇಶ ಸಂಖ್ಯೆ ಆಇ 10(ಇ) ಸೇನಿಸೇ 2023 ಮತ್ತು ದಿನಾಂಕ 17.1.2025ರ ಸರ್ಕಾರಿ ಆದೇಶ ಸಂಖ್ಯೆ ಆಇ 03 ಸೇನಿಸೇ 2024ರ ಆದೇಶ ಭಾಗದ ಕೊನೆಯಲ್ಲಿ ಈ ಕೆಳಗಿನವುಗಳನ್ನು ಸೇರಿಸಿ ತಿಳಿದುಕೊಳ್ಳತಕ್ಕದ್ದ ಎಂಬುದಾಗಿ ಹೇಳಿದ್ದಾರೆ.

ಗಳಿಕೆ ರಜೆ ನಗದೀಕರಣಕ್ಕೆ ಮಂಜೂರಾತಿ ನೀಡುವ ಆದೇಶವನ್ನು ಯಾವುದಾದರೂ ಕಾರಣದಿಂದ ನಿಗಧಿತ ಬ್ಲಾಕ್ ಅವಧಿಯಲ್ಲಿ ಹೊರಡಿಸಲು ಸಾಧ್ಯವಾಗದಿದ್ದರೆ ಸಂಬಂಧಿತ ಪ್ರಾಧಿಕಾರವು ಅಂತಹ ಆದೇಶವನ್ನು ಬ್ಲಾಕ್ ಅವಧಿ ಮುಕ್ತಾಯಗೊಂಡ ನಂತರವೂ ಹೊರಡಿಸಬಹುದು. ಆದರೆ, ಗಳಿಕೆ ರಜೆ ನಗದೀಕರಣದ ಆರ್ಥಿಕ ಪ್ರಯೋಜನವನ್ನು ಸಂಬಂಧಿತ ಆರ್ಥಿಕ ವರ್ಷವು ಅಂತ್ಯಗೊಳ್ಳುವ ಮುನ್ನ ಪಡೆಯತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ.
241 ಹುದ್ದೆಗಳಿಗೆ ಅರ್ಜಿ ಆಹ್ವಾನ: ದೇಶದ ಪ್ರತಿಷ್ಠಿತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ 241 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಮಾಸಿಕ ಸಂಬಳ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಸುಪ್ರೀಂ ಕೋರ್ಟ್ ಖಾಲಿ ಇರುವ ಉದ್ಯೋಗಗಳನ್ನು ನೇಮಕ ಮಾಡಲು ಮುಂದಾಗಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಕೆ ಆರಂಭ ಫೆಬ್ರವರಿ 05, 2025 ಅಂದರೆ ಇಂದಿನಿಂದ ಆರಂಭ ಆಗಿದ್ದು, ಕೊನೆ ದಿನಾಂಕ ಮಾರ್ಚ್ 03, 2025 ಆಗಿದೆ.
ಉದ್ಯೋಗದ ಹೆಸರು ಕಿರಿಯ ನ್ಯಾಯಾಲಯದ ಸಹಾಯಕ ಆಗಿದ್ದು, ಒಟ್ಟು 241 ಉದ್ಯೋಗಗಳು ಖಾಲಿ ಇವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 72,040 ರೂಪಾಯಿ ಇರಲಿದೆ. ಅರ್ಜಿ ಸಲ್ಲಿಸಬಯಸುವವರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇಂಗ್ಲಿಷ್ ಟೈಪಿಂಗ್ ಸ್ಪೀಡ್ 35 ಡಬ್ಲು.ಪಿ.ಎಂ, ಕಂಪ್ಯೂಟರ್ ಜ್ಞಾನ ಇರಬೇಕು. ವಯೋಮಿತಿ 18 ರಿಂದ 30 ವರ್ಷಗಳು.
ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ, ಜನರಲ್, ಒಬಿಸಿ, ಇಡಬ್ಲುಎಸ್ 1,000 ರೂಪಾಯಿ, ಎಸ್ಸಿ, ಎಸ್ಟಿ, ಮಾಜಿ ಸೈನಿಕ 250 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು. ಆಯ್ಕೆ ಪ್ರಕ್ರಿಯೆಯ ವಿವಾರಕ್ಕೆ ಬಂದರೆ, ಲಿಖಿತ ಪರೀಕ್ಷೆ (100 ಪ್ರಶ್ನೆಗಳು), ಕಂಪ್ಯೂಟರ್ ಜ್ಞಾನ Objective Type Test (25 ಪ್ರಶ್ನೆಗಳು), ಕಂಪ್ಯೂಟರ್ ಟೈಪಿಂಗ್ (35 ಡಬ್ಲು.ಪಿ.ಎಂ ), ಡಿಸ್ಕ್ರಿಪ್ಟಿವ್ ಟೈಪ್ ಪೇಪರ್ (Descriptive Test) ಮೂಲಕ ಆಯ್ಕೆ ಮಾಡಲಾಗುತ್ತದೆ.












Click it and Unblock the Notifications