ಐಬಿಪಿಎಸ್ ನೇಮಕಾತಿ 2022:170 SO ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ನವೆಂಬರ್ 3: ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) 170 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಪೆಷಲಿಸ್ಟ್ ಆಫೀಸರ್(SO) ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 21ರ ತನಕ ಅರ್ಜಿ ಸಲ್ಲಿಸಬಹುದು.

ದೇಶಾದ್ಯಾಂತ ಖಾಲಿ ಇರುವ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. "ಪಾರ್ಟಿಸಿಪೇಟಿಂಗ್ ಬ್ಯಾಂಕ್‌ಗಳಲ್ಲಿ ಆಫೀಸರ್ ಕೇಡರ್ ಹುದ್ದೆಗಳಿಗೆ ಸಿಬ್ಬಂದಿಯ ಆಯ್ಕೆಗಾಗಿ ಮುಂದಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಾಗಿ ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ) ಫೆಬ್ರವರಿ 2023 ಮತ್ತು ಮಾರ್ಚ್ 2023 ರಲ್ಲಿ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ" ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

ಸಂಸ್ಥೆ ಹೆಸರು: ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್)
ಒಟ್ಟು ಹುದ್ದೆ : 170
ಉದ್ಯೋಗ ಸಂಸ್ಥೆ: ಭಾರತದೆಲ್ಲೆಡೆ
ಹುದ್ದೆ ಹೆಸರು: ಸ್ಪೆಷಲಿಸ್ಟ್ ಆಫೀಸರ್(SO)

ಐಪಿಬಿಎಸ್ ಕ್ಲರ್ಕ್ ನೇಮಕಾತಿ 2022 ಹುದ್ದೆ ವಿವರ:
ಐ.ಟಿ. ಅಧಿಕಾರಿ (ಸ್ಕೇಲ್-I): 44
ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I): 516
ರಾಜಭಾಷಾ ಅಧಿಕಾರಿ (ಸ್ಕೇಲ್ I): 25
ಕಾನೂನು ಅಧಿಕಾರಿ (ಸ್ಕೇಲ್ I): 10
ಮಾನವ ಸಂಪನ್ಮೂಲ/ ಸಿಬ್ಬಂದಿ ಅಧಿಕಾರಿ (ಸ್ಕೇಲ್ I): 15
ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I): 100

ವಿದ್ಯಾರ್ಹತೆಯ ವಿವರ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ. ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ಪಡೆದುಕೊಳ್ಳಬಹುದು.

IBPS Specialist Officer Recruitment 2022: Apply for 710 Specialist Officer posts
  • ಐ.ಟಿ. ಅಧಿಕಾರಿ (ಸ್ಕೇಲ್-I): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ/ECEನಲ್ಲಿ ಪಿಜಿ/ಕಂಪ್ಯೂಟರ್ ಸೈನ್ಸ್/ಐಟಿ+ DOEACC 'ಬಿ' Level
  • ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I): ಪದವಿ (ಸಂಬಂಧಪಟ್ಟ ಪಠ್ಯ ವಿಷಯ)
  • ರಾಜಭಾಷಾ ಅಧಿಕಾರಿ (ಸ್ಕೇಲ್ I): ಸ್ನಾತಕೋತ್ತರ ಪದವಿ (ಸಂಬಂಧಪಟ್ಟ ಪಠ್ಯ ವಿಷಯ)
  • ಕಾನೂನು ಅಧಿಕಾರಿ (ಸ್ಕೇಲ್ I): ಎಲ್ ಎಲ್ ಬಿ
  • ಮಾನವ ಸಂಪನ್ಮೂಲ/ ಸಿಬ್ಬಂದಿ ಅಧಿಕಾರಿ (ಸ್ಕೇಲ್ I): ಸ್ನಾತಕೋತ್ತರ ಪದವಿ/ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ(ಮಾರ್ಕೆಟಿಂಗ್)

ವಯೋಮಿತಿ ವಿವರಗಳು: 20 ರಿಂದ 30ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಶುಲ್ಕ:

ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು 155 ರೂ. (ಜಿಎಸ್ಟಿ ಸೇರಿಸಿ) ಶುಲ್ಕವನ್ನು ಪಾವತಿ ಮಾಡಬೇಕು. ಉಳಿದ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಬೇಕು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.

IBPS Specialist Officer Recruitment 2022: Apply for 710 Specialist Officer posts

ನೇಮಕಾತಿ ಪ್ರಕ್ರಿಯೆ:
ಪೂರ್ವಭಾವಿ ಪರೀಕ್ಷೆ (100 ಅಂಕಗಳು), ಮುಖ್ಯ ಪರೀಕ್ಷೆ(225 ಅಂಕಗಳು) ಹಾಗೂ ಸಂದರ್ಶನ

ಪ್ರಮುಖ ದಿನಾಂಕ

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಎಡಿಟ್ ಮಾಡಲು, ಅರ್ಜಿಯ ಮಾರ್ಪಾಡು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 01-11-2022
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಡಿಟ್, ಅರ್ಜಿಯ ಮಾರ್ಪಾಡು ಮತ್ತು ಶುಲ್ಕ ಪಾವತಿ: 21-11-2022
  • ನಿಮ್ಮ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 01-12-2022
  • ಆನ್‌ಲೈನ್ ಪೂರ್ವಭಾವಿ ಪರೀಕ್ಷೆಗಾಗಿ ಕಾಲ್ ಲೆಟರ್ ಡೌನ್‌ಲೋಡ್ ಮಾಡುವ ದಿನಾಂಕ: ಡಿಸೆಂಬರ್ 2022
  • ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯ ದಿನಾಂಕ: 24 ರಿಂದ 31-12-2022
  • ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಘೋಷಣೆಯ ದಿನಾಂಕ: ಜನವರಿ 2023
  • ಆನ್‌ಲೈನ್ ಮುಖ್ಯ ಪರೀಕ್ಷೆಗಾಗಿ ಕರೆ ಪತ್ರವನ್ನು ಡೌನ್‌ಲೋಡ್ ಮಾಡುವ ದಿನಾಂಕ: ಜನವರಿ 2023
  • ಆನ್‌ಲೈನ್ ಮುಖ್ಯ ಪರೀಕ್ಷೆಯ ದಿನಾಂಕ: 29-01-2023
  • ಆನ್‌ಲೈನ್ ಮುಖ್ಯ ಪರೀಕ್ಷೆಯ ಫಲಿತಾಂಶದ ಘೋಷಣೆಯ ದಿನಾಂಕ: ಫೆಬ್ರವರಿ 2023
  • ಸಂದರ್ಶನಕ್ಕಾಗಿ ಕರೆ ಪತ್ರಗಳನ್ನು ಡೌನ್‌ಲೋಡ್ ಮಾಡಿದ ದಿನಾಂಕ: ಫೆಬ್ರವರಿ 2023
  • ಸಂದರ್ಶನದ ಸಂಭಾವ್ಯ ದಿನಾಂಕ: ಫೆಬ್ರವರಿ/ಮಾರ್ಚ್ 2023
  • ತಾತ್ಕಾಲಿಕ ಹಂಚಿಕೆಯ ದಿನಾಂಕ: ಏಪ್ರಿಲ್ 2023

ಅರ್ಜಿಗಳನ್ನು ಸಲ್ಲಿಕೆ ಮಾಡುವ ವಿಧಾನ:

ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ನಿಗದಿತ ವೆಬ್‌ ಸೈಟ್‌ನಲ್ಲಿ ಸರಿಯಾದ ಇ-ಮೇಲ್ ಐಡಿ, ಮೊಬೈಲ್ ನಂಬರ್ ನಮೂದು ಮಾಡಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ ಸರಿಯಾಗಿದೆಯೆ ಪರಿಶೀಲಿಸಿ.

ಮೊದಲನೆಯದಾಗಿ IBPS ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ.

ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

IBPS ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

IBPS ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ. ಸೇವ್ ಮಾಡಿಕೊಳ್ಳಿ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ibps.in ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+