ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IBPS PO ನೇಮಕಾತಿ 2021: 4135 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಹತೆ, ಮಾನದಂಡಗಳೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 20: ಐಬಿಪಿಎಸ್ ಪಿಒ ನೇಮಕಾತಿ 2021ರ ಅಧಿಸೂಚನೆಯನ್ನು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಬಿಡುಗಡೆ ಮಾಡಿದೆ. ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಆಫೀಸರ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗಳಿಗೆ ಒಟ್ಟು 4,135 ಹುದ್ದೆಗಳು ಖಾಲಿ ಇದ್ದು, ಮತ್ತು ಅಕ್ಟೋಬರ್ 20ರಿಂದ ನೋಂದಣಿ ಪ್ರಾರಂಭವಾಗುತ್ತದೆ. ನವೆಂಬರ್ 10, 2021 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ IBPS ಸೈಟ್ - ibps.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹತಾ ಮಾನದಂಡಗಳೇನು?
ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಆಫೀಸರ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪದವಿ ಹೊಂದಿರಬೇಕು.

IBPS PO Recruitment 2021: Apply For 4135 Posts, Check Eligibility, How To Apply In Kannada

ಅಭ್ಯರ್ಥಿಯು 20ರಿಂದ 30 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಯು ಅಕ್ಟೋಬರ್ 2, 1991ಕ್ಕಿಂತ ಮುಂಚೆ ಜನಿಸಿರಬಾರದು ಮತ್ತು ಅಕ್ಟೋಬರ್ 1, 2001ರ ನಂತರ ಜನಿಸಿರಬಾರದು (ಎರಡೂ ದಿನಾಂಕಗಳನ್ನು ಒಳಗೊಂಡಂತೆ).

ಅರ್ಜಿ ಶುಲ್ಕ ಎಷ್ಟು?
ಐಬಿಪಿಎಸ್ ಪಿಒ ನೇಮಕಾತಿ 2021ರ ಪ್ರೊಬೇಷನರಿ ಆಫೀಸರ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಎಲ್ಲಾ ಇತರೆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 850 ರೂ. ಪಾವತಿಸಬೇಕಾಗುತ್ತದೆ. ಎಸ್ಸಿ/ ಎಸ್ಟಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರು ಅರ್ಜಿ ಶುಲ್ಕವಾಗಿ 175 ರೂ. ಪಾವತಿಸಬೇಕಾಗುತ್ತದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕು.

ಐಬಿಪಿಎಸ್ ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ?
IBPS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಆನ್‌ಲೈನ್ ಉದ್ಯೋಗ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅಗತ್ಯ ವಿವರಗಳನ್ನು ಭರ್ತಿ ಮಾಡಿ, ನಿಮ್ಮನ್ನು ನೋಂದಾಯಿಸಿಕೊಳ್ಳಿ

ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ. ಹೆಚ್ಚಿನ ಬಳಕೆಗಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.

English summary
The Institute of Banking Personal Selection has released the notification of IBPS PO Recruitment 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X