7ನೇ ಕ್ಲಾಸ್ ಪಾಸಾದವರಿಗೆ ಹಾಸನ ಕೋರ್ಟ್ ಉದ್ಯೋಗಾವಕಾಶ
ಬೆಂಗಳೂರು, ನವೆಂಬರ್ 28: ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಒಟ್ಟು 24 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
7ನೇ ತರಗತಿ ಉತ್ತೀರ್ಣರಾಗಿರುವ ಆಸಕ್ತ ಹಾಗೂ ಅಭ್ಯರ್ಥಿಗಳು ದಿನಾಂಕ ಡಿಸೆಂಬರ್ 21, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳು: 24
ವಿದ್ಯಾರ್ಹತೆ: 7ನೇ ತರಗತಿ
ಅರ್ಜಿ ಶುಲ್ಕ: ಅಭ್ಯರ್ಥಿಗಳು ಆರ್ಜಿ ಸಲ್ಲಿಸಿದ ಬಳಿಕ ಶುಲ್ಕವನ್ನು ಎಸ್ ಬಿಐ ಬ್ಯಾಂಕ್ ನಲ್ಲಿ ದಿನಾಂಕ 23.12.2017ರೊಳಗೆ ತುಂಬಬೇಕು.
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಾಸನ ಜಿಲ್ಲಾ ಕೋರ್ಟ್ ನ ವೆಬ್ ಸೈಟ್ ನಲ್ಲಿ ಡಿಸೆಂಬರ್ 21, 2017, ರಾತ್ರಿ 11.59 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಬೇಕಾದ ಮೂಲ ದಾಖಲಾತಿಗಳು:
* ಅರ್ಜಿ ಸಲ್ಲಿಸಿದ ಪ್ರತಿ, * ಶುಲ್ಕ ತುಂಬಿದ ರಶೀದಿ ಪ್ರತಿ ಅಥವಾ ಚಲನ್, * SC/ ST / Cat-I/ IIA / IIB / IIIA / IIIB ವರ್ಗಕ್ಕೆ ಸೇರಿದವರಾಗಿದ್ದರೆ ಕಡ್ಡಾಯವಾಗಿ ಜಾತಿ ಆದಾಯ ಪ್ರಮಾಣ ಪತ್ರ, * ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, * ಕನ್ನಡ ಮಾಧ್ಯಮ, * ವೈದ್ಯಕೀಯ ಪ್ರಮಾಣ ಪತ್ರ. ಒಂದು ಭಾವ ಚಿತ್ರ.
ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ವೇಳೆ ಮೇಲಿ ತಿಳಿಸಲಾಗಿರುವ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದರಬೇಕು.
ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications