HAL Recruitment 2023: ತುಮಕೂರಿನಲ್ಲಿ 40 ಹುದ್ದೆಗಳ ಖಾಲಿ ಇವೆ, ವೇತನ, ಅರ್ಜಿ ಸಲ್ಲಿಕೆ ವಿವರ
ಬೆಂಗಳೂರು, ಸೆಪ್ಟಂಬರ್ 17: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ತುಮಕೂರಿನಲ್ಲಿ ಪೊಸ್ಟಿಂಗ್ ನೀಡಲಾಗುವುದು.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಒಟ್ಟು 40 ತಂತ್ರಜ್ಞರು, ಸಹಾಯಕರ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 24ರೊಳಗೆ ಅರ್ಜಿ ಸಲ್ಲಿಸಬಹುದು. ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಎಚ್‌ಎಎಲ್ ತಿಳಿಸಿದೆ.

ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ, ವೇತನ, ಶುಲ್ಕ ಎಷ್ಟು ಎಂಬೆಲ್ಲ ನೇಮಕಾತಿಯ ಮಾಹಿತಿಗಳನ್ನು ಇಲ್ಲಿ ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಮಾಹಿತಿ
ಸಂಸ್ಥೆ ಹೆಸರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
ಹುದ್ದೆ ಹೆಸರು: ತಂತ್ರಜ್ಞರು (ಟೆಕ್ನಿಷಿಯನ್), ಸಹಾಯಕ (ಅಸಿಸ್ಟೆಂಟ್)
ಖಾಲಿ ಹುದ್ದೆ ಸಂಖ್ಯೆ: 40
ಮಾಸಿಕ ವೇತನ: 23,000 ರೂಪಾಯಿ
ಸಂದರ್ಶನ ದಿನಾಂಕ- ಸೆಪ್ಟಂಬರ್ 24
ಉದ್ಯೋಗದ ಸ್ಥಳ: ತುಮಕೂರು
ಹುದ್ದೆಗಳ ಇತರ ಮಾಹಿತಿ
ಸ್ಟೋರ್ಸ್ ಕ್ಲರಿಕಲ್/ ಕಮರ್ಷಿಯಲ್ ಅಸಿಸ್ಟೆಂಟ್/ ಅಡ್ಮಿನ್ ಅಸಿಸ್ಟೆಂಟ್ : 4
ಅಕೌಂಟ್ಸ್: 2
ಟೆಕ್ನಿಷಿಯನ್ (ಸಿವಿಲ್):1
ಫಿಟ್ಟರ್: 17
ಎಲೆಕ್ಟ್ರಿಷಿಯನ್: 5
ಟೆಕ್ನಿಷಿಯನ್ (ಎಲೆಕ್ಟ್ರಿಕಲ್): 7
ಟೆಕ್ನಿಷಿಯನ್ (ಮೆಕ್ಯಾನಿಕಲ್): 2
ಐಟಿ ಅಸಿಸ್ಟೆಂಟ್: 2

ಶೈಕ್ಷಣಿಕ ಅರ್ಹತೆ ಏನಿರಬೇಕು
ಫಿಟ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ, ಡಿಪ್ಲೊಮಾ ಮಾಡಿರಬೇಕು. ಅದೇ ರೀತಿ ಎಲೆಕ್ಟ್ರಿಷಿಯನ್ ಹುದ್ದೆಗೆ ಐಟಿಐ, ಡಿಪ್ಲೊಮಾ, ಸ್ಟೋರ್ಸ್ ಕ್ಲರಿಕಲ್/ ಕಮರ್ಷಿಯಲ್ ಅಸಿಸ್ಟೆಂಟ್/ ಅಡ್ಮಿನ್ ಅಸಿಸ್ಟೆಂಟ್ ಹುದ್ದೆಗೆ ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಬಿಎಂ, ಬಿಸಿಎ, ಬಿಎಸ್‌ಡಬ್ಲು ಪದವಿ, ಅಕೌಂಟ್ಸ್ ಹುದ್ದೆಗೆ, ಬಿ.ಕಾಂ, ಪದವಿ ಮುಗಿಸಿರಬೇಕು.
ಟೆಕ್ನಿಷಿಯನ್ (ಸಿವಿಲ್) ಹುದ್ದೆಗೆ ಡಿಪ್ಲೊಮಾ, ಟೆಕ್ನಿಷಿಯನ್ (ಎಲೆಕ್ಟ್ರಿಕಲ್) ಟೆಕ್ನಿಷಿಯನ್ (ಮೆಕ್ಯಾನಿಕಲ್) ಮತ್ತು ಐಟಿ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮಾ ಪೂರ್ಣಗೊಳಿಸಬೇಕು.
ವಯೋಮಿತಿ ಮತ್ತು ಸಡಿಲಿಕೆ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕಳೆದ ತಿಂಗಳು ಆಗಸ್ಟ್ 1ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಿಳಿಸಿದೆ. ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ, ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು ಐದು ವರ್ಷ ಹಾಗೂ ಪಿಡಬ್ಲುಬಿಡಿ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಯಾವುದೇ ಅಭ್ಯರ್ಥಿಗಳು ಶುಲ್ಕ ಪಾವತಿಸುವಂತಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಮೆರಿಟ್ ಲಿಸ್ಟ್ ಪರಿಶೀಲಿಸಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ನಡೆಸಿ ದಾಖಲಾತಿ ಪರಿಶೀಲಿಸಲಾಗುತ್ದೆ. ಕೊನೆಗೆ ನೇರವಾಗಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಅಧಿಸೂಚನೆ ನೋಡಿಕೊಂಡು ಮಾಹಿತಿ ತಿಳಿದು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 080-22323744/22322964 ಇಲ್ಲಿಗೆ ಸಂಪರ್ಕಿಸಬೇಕು ಅಥವಾ ಇ-ಮೇಲ್ [email protected] ಸಂದೇಶ ಕಳುಹಿಸಬಹುದಾಗಿದೆ.












Click it and Unblock the Notifications