ಬಳ್ಳಾರಿ; ಅತಿಥಿ ಶಿಕ್ಷಕ ಸೇರಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಬಳ್ಳಾರಿ, ಜನವರಿ 01; ಬಳ್ಳಾರಿ ಜಿಲ್ಲೆಯಲ್ಲಿ ಅತಿಥಿ ಶಿಕ್ಷಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ವಿವಿಧ ತರಬೇತಿಗೆ ಸಹ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಜಿಲ್ಲೆಯ ಕುರುಗೋಡು ತಾಲೂಕು ವ್ಯಾಪ್ತಿಯ ಬಿ. ಬೆಳಗಲ್ಲು ತಾಂಡಾದ ಸರ್ಕಾರಿ ಪ್ರೌಢಶಾಲೆಗೆ ಈ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಅತಿಥಿ ಉಪನ್ಯಾಸಕರನ್ನು ನೇಮಕಮಾಡಿಕೊಳ್ಳಲು ಅರ್ಹ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಂಗ್ಲಿಷ್, ಹಿಂದಿ, ಕಲಾ, ಸಿಬಿಝೆಡ್ ಸೇರಿದಂತೆ ನಾಲ್ಕು ವಿಷಯಗಳಿಗೆ 4 ಹುದ್ದೆಗಳಿದ್ದು, ಅಭ್ಯರ್ಥಿಗಳು ಪದವಿ ಮತ್ತು ಬಿ. ಎಡ್‍ಗಳಲ್ಲಿ ಗಳಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Guest Teacher And Other Training At Ballari

ಟಿಇಟಿ ಉತ್ತೀರ್ಣ ಆದವರಿಗೆ ಆದ್ಯತೆ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ದೃಢೀಕೃತ ಅಂಕಪಟ್ಟಿಗಳೊಂದಿಗೆ ಅರ್ಜಿಗಳನ್ನು ಮುಖ್ಯೋಪಾಧ್ಯಾಯರು, ಸರಕಾರಿ ಉನ್ನತೀಕರಿಸಿದ ಪ್ರೌಢಶಾಲೆ, ಬಿ.ಬೆಳಗಲ್ಲು ತಾಂಡಾ ಇವರಿಗೆ ಖುದ್ದಾಗಿ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದು.

ತರಬೇತಿಗೆ ಅರ್ಜಿ ಆಹ್ವಾನ; ಹಳಿಯಾಳದ ಕೆನೆರಾ ಬ್ಯಾಂಕ್ ದೇಶಪಾಂಡೆ ರುಡ್‌ಸೆಟ್ (ಆರ್) ಮತ್ತು ಜೆಸಿಬಿ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಉಚಿತ ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್ ಹಾಗೂ ರಿಪೇರಿ, ರೆಪ್ರೀಜಿರೇಶನ್ ಮತ್ತು ಏರ್ ಕಂಡಿಶನರ್ ರಿಪೇರಿ ತರಬೇತಿಗೆ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಕೆ ಮಾಡುವವರು 18 ರಿಂದ 45 ವರ್ಷ ವಯೋಮಿತಿಯ ಯುವಕರಾಗಿರಬೇಕು. ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ, ಇತ್ಯಾದಿ ವಿವರಗಳನ್ನು ಬರೆದು ಅರ್ಜಿ ಸಲ್ಲಿಕೆ ಮಾಡಬೇಕು.

ಅರ್ಜಿಗಳನ್ನು ಕೆನೆರಾ ಬ್ಯಾಂಕ್ ದೇಶಪಾಂಡೆ ರುಡ್‌ಸೆಟ್ (ಆರ್), ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ - 581325 ಇಲ್ಲಿಗೆ ಜನವರಿ 8ರೊಳಗಾಗಿ ಕಳುಹಿಸಿಕೊಡಬೇಕು.

ತರಬೇತಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ಸಂಖ್ಯೆಗಳು 08284-298547, 8050741744, 9632143217, 9449782425.

ಉಚಿತ ತರಬೇತಿಗೆ ಅರ್ಜಿ ಹಾಕಿ; ಹಳಿಯಾಳ ಕೆನೆರಾ ಬ್ಯಾಂಕ್ ದೇಶಪಾಂಡೆ ರುಡ್ ಸೆಟ್ (ಆರ್) ಮತ್ತು ಜೆಸಿಬಿ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ಟ್ರೈನಿಂಗ್ ತರಬೇತಿಗೆ ಅರ್ಜಿ ಕರೆಯಲಾಗಿದೆ.

ಅರ್ಜಿಗಳನ್ನು ಸಲ್ಲಿಸುವವರು 18 ರಿಂದ 45 ವರ್ಷ ವಯೋಮಿತಿಯ ಯುವಕರಾಗಿರಬೇಕು. ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ, ಇತ್ಯಾದಿ ವಿವರಗಳನ್ನು ಬರೆದು ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ಕೆನರಾ ಬ್ಯಾಂಕ್ ದೇಶಪಾಂಡೆ ರುಡ್‌ಸೆಟ್ (ಆರ್), ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ - 581325 ಇಲ್ಲಿಗೆ ಜನವರಿ 12 ರೊಳಗಾಗಿ ಕಳುಹಿಸಿಕೊಡಬೇಕು. ತರಬೇತಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತ.

ಉದ್ಯೋಗ ನಿಯೋಜನೆ ಮಾರ್ಗದರ್ಶನ ಸೌಲಭ್ಯ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 08284-298547, 8050741744, 9632143217, 9449782425.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+