ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ನಲ್ಲಿ ನೇಮಕಾತಿ
ಬೆಂಗಳೂರು, ಜನವರಿ 12: ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 45 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
5 ಶೋರೂಮ್ ಆಫೀಸರ್, ಐದು ಕ್ಯಾಷಿಯರ್ ಕಮ್ ಅಕೌಂಟೆಂಟ್ ಸೇರಿದಂತೆ ಹಲವು ಹುದ್ದೆಗಳಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ದಿನಾಂಕ 31 ಜನವರಿ 2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹುದ್ದೆ: ಶೋರೂಮ್ ಆಫೀಸರ್, ಕ್ಯಾಷಿಯರ್ ಕಮ್ ಅಕೌಂಟೆಂಟ್

ಹುದ್ದೆ ಎಲ್ಲಿ?: ಬೆಂಗಳೂರು
1. ಶೋರೂಮ್ ಆಫೀಸರ್
* ವಿದ್ಯಾರ್ಹತೆ: ಡಿಗ್ರಿ ಪದವಿ ಪೂರ್ಣಗೊಳಿಸಿರಬೇಕು. ಹಾಗೂ 8 ವರ್ಷ ಅನುಭವ ಹೊಂದಿರಬೇಕು.
* ವೇತನ ಶ್ರೇಣಿ: 21600 ರಿಂದ 40050 ರು. ತಿಂಗಳಿಗೆ
* ವಯೋಮತಿ: ಗರಿಷ್ಟ 45 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
2. ಕ್ಯಾಷಿಯರ್ ಕಮ್ ಅಕೌಂಟೆಂಟ್
* ವಿದ್ಯಾರ್ಹತೆ: ಡಿಗ್ರಿ ಪದವಿ ಪೂರ್ಣಗೊಳಿಸಿರಬೇಕು. ಹಾಗೂ 6 ವರ್ಷ ಅನುಭವ ಹೊಂದಿರಬೇಕು.
* ವೇತನ ಶ್ರೇಣಿ: 14550 ರಿಂದ 26700 ರು. ತಿಗಳಿಗೆ.
* ವಯೋಮತಿ: ಗರಿಷ್ಟ 45 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications