ಕರ್ನಾಟಕ ಪೊಲೀಸ್ ನೇಮಕಾತಿ; ಒಟ್ಟು 4104 ಹುದ್ದೆ ಭರ್ತಿ

ಬೆಂಗಳೂರು, ಮೇ 05 : ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. 4014 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟವಾಗಲಿದೆ. ಆಸಕ್ತ ಅಭ್ಯರ್ಥಿಗಳು ಮೇ 20ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Recommended Video

      ನನಗೆ ನಾನೇ ಹೈ ಕಮಾಂಡ್ ಎಷ್ಟೇ ನೋವಿದ್ರೂ ಸಿದ್ದರಾಮಯ್ಯ ಮುಖ ನೋಡ್ಕೊಂಡು ಸುಮ್ನಿದ್ವಿ | Shivanand | Siddaramaiah

      ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಕುರಿತು ಜಾಹೀರಾತು ನೀಡಲಾಗಿದೆ. ಅಧಿಸೂಚನೆ ಮೇ 20ರಂದು ಪ್ರಕಟವಾಗಲಿದ್ದು, ಜೂನ್ 22ರ ತನಕ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

      ಜನರಿಗೆ ಸೇವೆ ಸಲ್ಲಿಸುವ ಅಭಿಲಾಷೆ ಉಳ್ಳವರಿಗೆ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನಕ್ಕೆ ಅವಕಾಶವಿದೆ. ಆಸ್ತಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

      Get Ready To Apply For Karnataka Police Constable Recruitment

      ಪೊಲೀಸ್ ಕಾನ್ ಸ್ಟೇಬಲ್(ನಾಗರಿಕ) ಪುರುಷ ಮತ್ತು ಮಹಿಳೆ 2565 ಹುದ್ದೆಗಳು, ಸಶಸ್ತ್ರ ಪೊಲೀಸ್ ಕಾನ್ಸ್‌ಸ್ಟೇಬಲ್ (ಸಿಎಆರ್/ಡಿಎಆರ್) ಪುರುಷ 1449 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

      ಒಟ್ಟು 4104 ಹುದ್ದೆಗಳಲ್ಲಿ 1002 ಹುದ್ದೆಗಳು ಹೈದರಾಬಾದ್-ಕರ್ನಾಟಕಕ್ಕೆ ಮೀಸಲಾಗಿರುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಹುದ್ದೆಯ ವಿವರ, ವಿದ್ಯಾರ್ಹತೆ ಮುಂತಾದ ಮಾಹಿತಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.

      ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬಹುದಾಗಿದೆ.

      ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ ನೋಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+