ಗೆಜೆಟೆಡ್ ಪ್ರೊಬೇಷನರ್ಸ್; 384 ಹುದ್ದೆ ಭರ್ತಿ, ಯಾವ ಇಲಾಖೆಗೆ ಎಷ್ಟು?
ಬೆಂಗಳೂರು, ಫೆಬ್ರವರಿ 05: ಕರ್ನಾಟಕದ ಆರ್ಥಿಕ ಇಲಾಖೆ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಿದೆ. 2023-24ನೇ ಸಾಲಿನಲ್ಲಿ ಒಟ್ಟು 384 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ಸಿಕ್ಕಿದ್ದು, ಯಾವ ಇಲಾಖೆಗೆ ಎಷ್ಟು ಎಂದು ಸಹ ಹಂಚಿಕೆ ಮಾಡಲಾಗಿದೆ.
ಈ ಕುರಿತು ಡಿ. ಚಂದ್ರಕಲಾ, ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-7) ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರ 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರುಗಳ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳ ರಿಕ್ತ ಸ್ಥಾನಗಳನ್ನು ಬಿಡುಗಡೆ ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ರಿಕ್ತ ಸ್ಥಾನಗಳು ತಾತ್ಕಾಲಿಕವಾಗಿದ್ದು, ಬದಲಾವಣೆಗೆ ಒಳಪಟ್ಟಿರುತ್ತದೆ. ಹಾಗೆಯೇ ಮೀಸಲಾತಿ ವರ್ಗೀಕರಣವು ಬದಲಾವಣೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿದೆ.
ನಿಯಮಗಳ ಅನ್ವಯ ಸೂಕ್ತ ಷರತ್ತುಗಳನ್ನು ಅಳವಡಿಸಿ ರಿಕ್ತ ಸ್ಥಾನಗಳನ್ನು ನೇಮಕಾತಿಗಾಗಿ ಪ್ರಕಟಿಸಿ ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನು ಜರುಗಿಸುವಂತೆ ಸೂಚನೆ ನೀಡಲಾಗಿದ್ದು, ಈ ಬಗ್ಗೆ ಆಯೋಗ ಹೊರಡಿಸುವ ಅಧಿಸೂಚನೆಯ 15 ಪ್ರತಿಗಳನ್ನು ಸರ್ಕಾರದ ಮಾಹಿತಿಗಾಗಿ ಕಳುಹಿಸಿಕೊಡಲು ಕೋರಿದೆ.
2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997ರಡಿ ಈ ಕೆಳಕಂಡ ವೃಂದಗಳಲ್ಲಿನ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ರಿಕ್ತ ಸ್ಥಾನಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆದೇಶ ಹೇಳಿದೆ.
ಯಾವ ಇಲಾಖೆಗೆ ಎಷ್ಟು ಗ್ರೂಪ್-ಎ ಹುದ್ದೆಗಳು
* ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ). ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 37, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 3 ಒಟ್ಟು 40.
* ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು. ವಾಣಿಜ್ಯ ತೆರಿಗೆ ಇಲಾಖೆ ಉಳಿಕೆ ವೃಂದದ ರಿಕ್ತ ಸ್ಥಾನ 30, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 11 ಒಟ್ಟು 41.
* ಸಹಾಯಕ ನಿರ್ದೇಶಕರು. ಖಜಾನೆ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 1, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 2.
* ಕಾರ್ಯ ನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 32, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 8 ಒಟ್ಟು 40.
* ಡಿವೈಎಸ್‌ಪಿ. ಒಳಾಡಳಿತ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 7, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 2 ಒಟ್ಟು 9.
* ಸಹಾಯಕ ನಿರ್ದೇಶಕರು ಗ್ರೇಡ್-1. ಸಮಾಜ ಕಲ್ಯಾಣ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 14, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 6 ಒಟ್ಟು 20.
* ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು (ಪಿಇಟಿಸಿ) ಹಿಂದುಳಿದ ವರ್ಗಗಳ ಕಲ್ಯಾಣ ಉಳಿಕೆ ವೃಂದದ ರಿಕ್ತ ಸ್ಥಾನ 5, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 2 ಒಟ್ಟು 7.
ಇಲಾಖಾವಾರು ವಿವರ ಗ್ರೂಪ್-ಬಿ
* ತಹಶೀಲ್ದಾರ್ (ಗ್ರೇಡ್-2) ಕಂದಾಯ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 37, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 14 ಒಟ್ಟು 51.
* ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 49, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 10 ಒಟ್ಟು 59.
* ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 3, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 4.
* ಸಹಾಯಕ ಅಧೀಕ್ಷಕರು. ಒಳಾಡಳಿತ ಇಲಾಖೆ (ಕಾರಾಗೃಹ). ಉಳಿಕೆ ವೃಂದದ ರಿಕ್ತ ಸ್ಥಾನ 2, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 3.
* ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 12, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 0, ಒಟ್ಟು 12.
* ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 9, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 0 ಒಟ್ಟು 9.
* ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ (ಅಬಕಾರಿ). ಉಳಿಕೆ ವೃಂದದ ರಿಕ್ತ ಸ್ಥಾನ 8, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 2 ಒಟ್ಟು 10.
* ಉದ್ಯೋಗಾಧಿಕಾರಿ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 2, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 3.
* ಸಹಾಯಕ ನಿರ್ದೇಶಕರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 4, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 0 ಒಟ್ಟು 4.
* ಮುಖ್ಯಾಧಿಕಾರಿ (ಗ್ರೇಡ್-1) ನಗರಾಭಿವೃದ್ಧಿ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 0, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 1.
* ಸಹಾಯಕ ಖಜನಾಧಿಕಾರಿ. ಆರ್ಥಿಕ ಇಲಾಖೆ (ಖಜಾನೆ). ಉಳಿಕೆ ವೃಂದದ ರಿಕ್ತ ಸ್ಥಾನ 38, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 8 ಒಟ್ಟು 46.
* ಸಹಾಯಕ ನಿರ್ದೇಶಕರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 9, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 0 ಒಟ್ಟು 9.
* ಸಹಾಯಕ ನಿರ್ದೇಶಕರು. ಪ್ರವಾಸೋದ್ಯಮ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 1, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 2.
* ಶಾಖಾಧಿಕಾರಿ ಕರ್ನಾಟಕ ಸರ್ಕಾರದ ಸಚಿವಾಲಯ. ಉಳಿಕೆ ವೃಂದದ ರಿಕ್ತ ಸ್ಥಾನ 4, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 5.
* ಸಹಾಯಕ ನಿರ್ದೇಶಕರು (ಗ್ರೇಡ್-2). ಸಮಾಜ ಕಲ್ಯಾಣ ಇಲಾಖೆ. ಉಳಿಕೆ ವೃಂದದ ರಿಕ್ತ ಸ್ಥಾನ 6, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನ 1 ಒಟ್ಟು 7.












Click it and Unblock the Notifications