ಗದಗ ಜಿಲ್ಲಾ ಕೋರ್ಟಿನಲ್ಲಿ 7ನೇ ತರಗತಿ ಪಾಸಾದವರಿಗೆ ಉದ್ಯೋಗ!
ಗದಗ, ನವೆಂಬರ್ 30: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ(peon) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ್ 23ರೊಳಗೆ ಆರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ: ಗದಗ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗ
ಒಟ್ಟು ಹುದ್ದೆಗಳು: 7
ಹುದ್ದೆ ಹೆಸರು: ಜವಾನ (Peon)
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ಮಿತಿ, ಎಸ್ ಸಿ/ಎಸ್ಟಿಗಳಿಗೆ 18 ರಿಂದ 40 ವರ್ಷ ಮಿತಿ ನಿಗದಿಯಾಗಿದೆ.

ವಿದ್ಯಾರ್ಹತೆ: 7ನೇ ತರಗತಿ ಪಾಸಾಗಿರಬೇಕು. ಕನ್ನಡ ಓದಲು ಹಾಗೂ ಬರೆಯಲು ಬರಬೇಕು.
ಆಯ್ಕೆ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.
ಸಂಬಳ ವಿವರ : 9,600 ದಿಂದ 14,550/ ಪ್ರತಿ ತಿಂಗಳು.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗೆ 100 ರು, ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 50 ರು. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ (ಎಸ್ ಬಿಐ) ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಓದಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications