ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅ.3ರಿಂದ ಉಚಿತ ತರಬೇತಿ
ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರಿನ ಕೃಷ್ಣರಾಜಪುರಂನಲ್ಲಿರುವ ಇಂಡಿಯನ್ ಐಎಎಸ್- ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 4 ತಿಂಗಳು ಉಚಿತ ತರಬೇತಿ ನೀಡಲಾಗುತ್ತಿದೆ. ಅಕ್ಟೋಬರ್ 3ರಿಂದ ತರಗತಿಗಳು ಪ್ರಾರಂಭವಾಗಲಿವೆ.
ಕೆಎಎಸ್, ಪಿಎಸ್ಐ, ಎಫ್‌ಡಿಎ, ಗ್ರೂಪ್ ಸಿ, ಪಿಡಿಒ, ಪಿಸಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ 4 ತಿಂಗಳವರೆಗೆ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಅಕಾಡೆಮಿಯ ಮುಖ್ಯಸ್ಥ ಭಾಸ್ಕರ್ ತಿಳಿಸಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಆಸಕ್ತ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತ ತರಬೇತಿ ನೀಡುತ್ತಿರುವುದಾಗಿ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 1ರಿಂದ ತರಗತಿಗಳು ಆರಂಭವಾಗಲಿದ್ದು, ಇಂದಿನಿಂದ ಪ್ರವೇಶ ಪಡೆಬಹುದಾಗಿದೆ.
ವಿಳಾಸ: ಇಂಡಿಯನ್ ಐಎಎಸ್- ಕೆಎಎಸ್ ಕೋಚಿಂಗ್ ಅಕಾಡೆಮಿ, ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಎದುರು, ಕೆ.ಆರ್, ಪುರಂ, ಬೆಂಗಳೂರು- 36. ಹೆಚ್ಚಿನ ಮಾಹಿತಿಗಾಗಿ: 9108440145 ಸಂಪರ್ಕಿಸಬಹುದು.
Recommended Video
ಅಮೆರಿಕಾಗೆ ಸರ್ವಾಧಿಕಾರಿ ವಾರ್ನಿಂಗ್!! ಮುಂದೆ ಕಾದಿದೆ ಮಾರಿ ಹಬ್ಬ | Oneindia Kannada












Click it and Unblock the Notifications