11 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಎಂಜಿನಿಯರ್ಸ್ ಇಂಡಿಯ
ಬೆಂಗಳೂರು, ಆಗಸ್ಟ್ 07 : ಇಐಎಲ್ 11 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 17, 2018 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಎಂಜಿನಿಯರ್ಸ್ ಇಂಡಿಯ ಲಿ.(ಇಐಎಲ್) ಸೀನಿಯರ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್, ಲೀಗಲ್/ಎಚ್.ಆರ್.ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಸೀನಿಯರ್ ಮ್ಯಾನೇಜರ್/ಲೀಗಲ್ ಅಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು.

ಡೆಪ್ಯೂಟಿ ಮ್ಯಾನೇಜರ್/ಎಚ್.ಆರ್.ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಬಿಎ ಪದವಿ ಪಡೆದಿರಬೇಕು. ಪಿಜಿ ಡಿಗ್ರಿ, ಪಿಜಿ ಡಿಪ್ಲೊಮಾ ಇನ್ ಎಚ್ಆರ್/ಪಿಎಂ ಎಂಡ್ ಐಆರ್/ಲೇಬರ್ ವೆಲ್‌ಫೇರ್ ವ್ಯಾಸಂಗ ಮಾಡಿದವರು ಅರ್ಜಿ ಹಾಕಬಹುದು.
ವಯೋಮಿತಿ ವಿವರ
* ಸೀನಿಯರ್ ಮ್ಯಾನೇಜರ್ 40 ವರ್ಷ
* ಡೆಪ್ಯೂಟಿ ಮ್ಯಾನೇಜರ್ 32 ವರ್ಷ
* ಲೀಗಲ್/ಎಚ್ ಆರ್ ಆಫೀಸರ್ 28 ವರ್ಷ 25 ಜುಲೈ 2018ಕ್ಕೆ ಅನ್ವಯವಾಗುವಂತೆ
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 500 ರೂ., ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ
* ಸೀನಿಯರ್ ಮ್ಯಾನೇಜರ್ 90000-240000 ಪ್ರತಿ ತಿಂಗಳು
* ಡೆಪ್ಯೂಟಿ ಮ್ಯಾನೇಜರ್ 70000-200000 ಪ್ರತಿ ತಿಂಗಳು
* ಲೀಗಲ್/ಎಚ್ಆರ್ ಆಫೀಸರ್ 60000-180000 ಪ್ರತಿ ತಿಂಗಳು
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications