Meesho: ಇ-ಕಾಮರ್ಸ್ ಸಂಸ್ಥೆ 'ಮೀಶೋ'ದಿಂದ 5ಲಕ್ಷ ಉದ್ಯೋಗವಕಾಶ
ಬೆಂಗಳೂರು, ಸೆಪ್ಟಂಬರ್ 26: ಹಬ್ಬಗಳು ಒಂದರ ಹಿಂದೊಂದರಂತೆ ಎದುರಾಗಲಿವೆ. ಈ ಸಂಬಂಧ ಹಬ್ಬದ ಋತುವಿನಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಉತ್ತಮ ಸೇವೆ ನೀಡಲು ತನ್ನ ಮಾರಾಟಗಾರ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನಲ್ಲಿ ಸುಮಾರು 5 ಲಕ್ಷ ಸೀಸನಲ್ ಉದ್ಯೋಗಾವಕಾಶ ನೀಡಲು ಇ-ಕಾಮರ್ಸ್ ಸಂಸ್ಥೆ ಮೀಶೋ ಮುಂದಾಗಿದೆ.
ಸಾಫ್ಟ್‌ಬ್ಯಾಂಕ್ ಬೆಂಬಲಿತ ಇ-ಕಾಮರ್ಸ್ ಸಂಸ್ಥೆ ಮೀಶೋ ಕಳೆದ ವರ್ಷ ಸೃಷ್ಟಿಸಿದ್ದ ಸೀಸನಲ್ (ಋತು ಆಧಾರಿತ) ಉದ್ಯೋಗಗಳಿಗಿಂತ ಈ ಬಾರಿಯ ಉದ್ಯೋಗ ಸೃಷ್ಟಿ ಶೇಕಡಾ 50ರಷ್ಟು ಹೆಚ್ಚಳ ಎನ್ನಲಾಗಿದೆ.

ವಿವಿಧ ಥರ್ಡ್-ಪಾರ್ಟಿ ಲಾಜಿಸ್ಟಿಕ್ಸ್ ಪ್ಲೇಯರ್‌ಗಳ ಜೊತೆಗೆ ತನ್ನ ಪಾಲುದಾರಿಕೆಯ ಮೂಲಕ ಸರಿಸುಮಾರು 2ಲಕ್ಷ ಉದ್ಯೋಗ ಅವಕಾಶಗಳನ್ನು ಸಕ್ರಿಯಗೊಳಿಸುವ ಗುರಿ ಮೀಶೋ ಹೊಂದಿದೆ. ಶೇಕಡಾ 60 ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಶ್ರೇಣಿ-III ಮತ್ತು ಶ್ರೇಣಿ-IV ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಾಥಮಿಕವಾಗಿ ಡೆಲಿವರಿ ಪಿಕಿಂಗ್, ವಿಂಗಡಣೆ, ಲೋಡಿಂಗ್, ಇಳಿಸುವಿಕೆ ಮತ್ತು ರಿಟರ್ನ್ ತಪಾಸಣೆಗಳಂತಹ ಉದ್ಯೋಗಗಳು ಈ ಐದು ಲಕ್ಷ ಉದ್ಯೋಗಗಳಲ್ಲಿ ಇವೆ.
ಹಬ್ಬಗಳಲ್ಲಿ ಬೇಡಿಕೆ ಅಧಿಕ: ಉದ್ಯೋಗ ಸೃಷ್ಟಿ
ಮುಂದೆ ದಸರಾ, ದೀಪಾವಳಿಯಂತಹ ಹಬ್ಬಗಳ ಋತುವಿನಲ್ಲಿ ಉತ್ಪನಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಲಿದ್ದು, ಅದರ ಪೂರೈಕೆಗೆ ಈ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಈ ಮೂಲಕ ನಾವು ಗ್ರಾಹಕರ ಸಂತೃಪ್ತಿ, ಅನುಭವ ಹೆಚ್ಚಿಸಲಿದ್ದೇವೆ ಎಂದು ಮೀಶೋ ಅಧಿಕಾರಿ ಸೌರಭ್ ಪಾಂಡೆ ತಿಳಿಸಿದರು.

ಮೀಶೋ ಮಾರಾಟಗಾರರು ಹಬ್ಬದ ಸೀಸನ್‌ಗಾಗಿ ತಮ್ಮ ಅವಶ್ಯಕತೆಗಳ ಭಾಗವಾಗಿ 3 ಲಕ್ಷಕ್ಕೂ ಹೆಚ್ಚು ಸೀಸನಲ್ ಕಾರ್ಮಿಕರನ್ನು ನೇಮಿಸಿಕೊಳ್ಳಲಿದೆ. ಈ ಸೀಸನಲ್ ಕಾರ್ಮಿಕರು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ವಿಂಗಡಣೆ ಸೇರಿದಂತೆ ವಿವಿಧ ಸಾಮರ್ಥ್ಯಗಳಲ್ಲಿ ಮೀಶೋನ ಮಾರಾಟಗಾರರಿಗೆ ಸಹಾಯ ಮಾಡಲಿದ್ದಾರೆ.
ಹೊಸ ಉತ್ಪನ್ನಗಳ ಪರಿಚಯಕ್ಕೆ ಸಿದ್ಧತೆ
ಮೀಶೋನ ಶೇಕಡಾ 80ಕ್ಕಿಂತ ಹೆಚ್ಚು ಮಾರಾಟಗಾರರು ಹಬ್ಬಕ್ಕೆ ಹೊಸ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ, ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ. ಫ್ಯಾಶನ್ ಪರಿಕರಗಳು ಮತ್ತು ಹಬ್ಬದ ಅಲಂಕಾರಗಳಂತಹ ಒಂದು ಹೊಸ ವಿಭಾಗವನ್ನು ತೆರೆಯಲಿದ್ದಾರೆ. ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿಂದಾಗಿ ಸಮರ್ಪಕ ಪೂರೈಕೆಗೆ ಮೀಶೋ ಸಜ್ಜಾಗಿದೆ.
ಮೀಶೋನ ಮಾರಾಟಗಾರರಲ್ಲಿ 30 ಪ್ರತಿಶತಕ್ಕಿಂತಲೂ ಹೆಚ್ಚಿನವರು ತಮ್ಮ ದಾಸ್ತಾನುಗಳಿಗಾಗಿ ಹೆಚ್ಚುವರಿ ಶೇಖರಣಾ ಸ್ಥಳವನ್ನು ಬಾಡಿಗೆಗೆ ಹೂಡಿಕೆ ಮಾಡುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಟೈರ್-III+ ಪ್ರದೇಶಗಲ್ಲಿ ಈ ಬಾರಿಯ ವ್ಯಾಪಾರ, ಬೇಡಿಕೆ ಹೆಚ್ಚಾಗಿರುವ ಸಾಧ್ಯತೆಗಳು ಇವೆ ಎಂದು ಶಾಡೋಫ್ಯಾಕ್ಸ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಬನ್ಸಾಲ್ ತಿಳಿಸಿದ್ದಾರೆ.
ಮೀಶೋ ಭಾರತದ ಥರ್ಡ್-ಪಾರ್ಟಿ ಲಾಜಿಸ್ಟಿಕ್ಸ್ (3PL) ಪರಿಸರ ವ್ಯವಸ್ಥೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. 2023ರ ಆರ್ಥಿಕ ವರ್ಷದಲ್ಲಿ ಥರ್ಡ್ ಪಾರ್ಟಿ ಲಾಜಿಸ್ಟಿಕ್ಸ್ ಸಾಗಣೆಯನ್ನು 1.2 ಬಿಲಿಯನ್‌ಗೆ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆ ಮೀಶೋ ಹೊಂದಿದೆ.












Click it and Unblock the Notifications