Job News: ಚಿತ್ರದುರ್ಗದಲ್ಲಿ ಜುಲೈ 30ರಂದು ನೇರ ನೇಮಕಾತಿ ಸಂದರ್ಶನ-ಅಭ್ಯರ್ಥಿಗಳು ತರಬೇಕಾದ ದಾಖಲೆಗಳ ವಿವರ ತಿಳಿಯಿರಿ
ಚಿತ್ರದುರ್ಗ, ಜುಲೈ, 26: ಜಿಲ್ಲೆಯ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜುಲೈ 30ರಂದು ಬೆಳಗ್ಗೆ 10ರಿಂದ 2 ಗಂಟೆಯವರೆಗೆ, ನೇರ ನೇಮಕಾತಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದರೆ ಆಸಕ್ತ ಅಭ್ಯರ್ಥಿಗಳು ತರಬೇಕಾದ ದಾಖಲೆಗಳ ವಿವರ ಇಲ್ಲಿದೆ ತಿಳಿಯಿರಿ.
ವಿವಿಧ ಖಾಸಗಿ ಕಂಪನಿಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಪುರುಷ ಅಥವಾ ಮಹಿಳೆ ಅಭ್ಯರ್ಥಿಗಳನ್ನು ಸಂದರ್ಶನದಲ್ಲಿ ನೇರವಾಗಿ ಕಂಪನಿಗಳು ಆಯ್ಕೆ ಮಾಡಿಕೊಳ್ಳಲಿವೆ.

ಉದ್ಯೋಗ ಹುಡುಕಾಟದಲ್ಲಿರುವ ಆಸಕ್ತರು ತಮ್ಮ ಮೂಲ ದಾಖಲೆಗಳೊಂದಿಗೆ ಈ ವಿದ್ಯಾಭ್ಯಾಸ ಹೊಂದಿರುವವರು ಎಸ್ಎಸ್ಎಲ್‌ಸಿ, ಪಿಯುಸಿ, ಐಟಿಐ ಸೇರಿದಂತೆ ಯಾವುದೇ ಪದವಿ ಹೊಂದಿರುವ 18 ರಿಂದ 30ವರ್ಷದೊಳಗಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಆಸಕ್ತರು ಸಂದರ್ಶನಕ್ಕೆ ಆಗಮಿಸುವಾಗ 5 ಪ್ರತಿ ಬಯೋಡೇಟಾ, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಪೋಟೋಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಸ್ಟೇಡಿಯಂ ರಸ್ತೆ ತಿರುವಿನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗೆ ಭೇಟಿ ನೀಡಬಹುದು. ಅಥವಾ ಕಚೇರಿ ದೂರವಾಣಿ ಸಂಖ್ಯೆ 7022459064 8105619020, 9945587060ಗೆ ಸಂಪರ್ಕಿಸಬಹುದಾಗುದೆ ಎಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications