ಮೈಸೂರಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮೈಸೂರು, ಸೆಪ್ಟೆಂಬರ್ 17 : ಮೈಸೂರಿನ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೋಡಲ್ ಅಧಿಕಾರಿ/ಸಮಾಜ ಕಾರ್ಯಕರ್ತರ ಹುದ್ದೆಗೆ ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಮತ್ತು ಪುನರ್ವಸತಿ ಸೇವೆ ಅನುಭವ ಹೊಂದಿರಬೇಕು. ಕೃತಕಾಂಗ ಜೋಡಣೆ ಪಿ & ಓ ಅಭಿಯಂತರರು ಹುದ್ದೆಗೆ ಪಿ&ಓ ಇಂಜಿನಿಯರಿಂಗ್ ಪದವಿ/ ಡಿಪ್ಲೊಮಾ ವಿದ್ಯಾರ್ಹತೆ ಮತ್ತು 2 ರಿಂದ 5 ವರ್ಷ ಅನುಭವ ಇರಬೇಕು.

ಪ್ರಾಸ್ಥೋಟಿಸ್ಟ್/ಆರ್ಥೊಟಿಸ್ಟ್ ಹುದ್ದೆಗೆ ಡಿಪ್ಲೊಮಾ ಇನ್ ಪಿ&ಓ / ಐಟಿಐ (ಫಿಟ್ಟರ್) ವಿದ್ಯಾರ್ಹತೆ ಮತ್ತು 2 ವರ್ಷದ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು.

DDRC Mysuru invites application for various post

ಫಿಸಿಯೋಥೆರಪಿಸ್ಟ್/ ಆಕ್ಯುಪೇಷನಲ್ ಥೆರಪಿಸ್ಟ್ ಹುದ್ದೆಗೆ ಡಿಗ್ರಿ ಇನ್ ಫಿಸಿಯೋಥೆರಪಿ ಅಥವಾ ಅಕ್ಯುಪೇಷನ್ ಥೆರಪಿ ವಿದ್ಯಾರ್ಹತೆ ಹೊಂದಿರಬೇಕು.

ಮೊಬಿಲಿಟಿ ಇನ್ಸ್‍ಟ್ರಕ್ಟರ್ (ಚಲನ-ವಲನ ತರಬೇತಿದಾರರು) ಹುದ್ದೆಗೆ ಸರ್ಟಿಫಿಕೇಟ್ ಕೋರ್ಸ್ ಇನ್ ಓ&ಎಂ ವಿದ್ಯಾರ್ಹತೆ ಹಾಗೂ ಇಯರ್ ಮೋಲ್ಡ್ ಟೆಕ್ನಿಶಿಯನ್ ಹುದ್ದೆಗೆ ಸರ್ಟಿಫಿಕೇಟ್ ಕೋರ್ಸ್ ಇನ್ ಇಯರ್ ಮೋಲ್ಡ್ ಟೆಕ್ನಾಲಜಿಯಲ್ಲಿ ತೇರ್ಗಡೆ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳ ನಕಲು ಪ್ರತಿಗಳ ಸಹಿತ ಸ್ವ ವಿವರವನ್ನು ಅರ್ಜಿಯೊಂದಿಗೆ ದಿನಾಂಕ 22/9/2018ರ ಸಂಜೆ 5ರೊಳಗೆ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವಿಳಾಸ
ಸದಸ್ಯ ಕಾರ್ಯದರ್ಶಿಗಳು
ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ
ಭಾರತೀಯ ರೆಡ್‍ಕ್ರಾಸ್ ಸೊಸೈಟಿ
ಡಿ.ಆರ್.ಸಿ ಕಟ್ಟಡ
ಪುಲಿಕೇಶಿ ರಸ್ತೆ
ತಿಲಕ್‍ನಗರ
ಮೈಸೂರು-570001

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+