CRPF ನೇಮಕಾತಿ 2020: 800ಕ್ಕೂ ಅಧಿಕ ವಿವಿಧ ಹುದ್ದೆಗಳಿವೆ
ನವದೆಹಲಿ, ಜುಲೈ 13: ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್(CRPF) 2020ನೇ ಸಾಲಿನ ನೇಮಕಾತಿ ಆರಂಭಿಸಿದ್ದು, ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಹೊರಡಿಸಿದೆ. 800 ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Central Reserve Police Force
ಹುದ್ದೆ ಹೆಸರು: Paramedical Staff
ಒಟ್ಟು ಹುದ್ದೆ : 800
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್ 31, 2020
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಪಾಸಾಗಿರಬೇಕು, ಸಂಬಂಧಪಟ್ಟ ಪದವಿ ಗಳಿಸಿರಬೇಕು.

ವಯೋಮಿತಿ:
ಕನಿಷ್ಠ ವರ್ಷ: 18 ವರ್ಷ
ಗರಿಷ್ಠ ವರ್ಷ: 30 ವರ್ಷ
ಅರ್ಜಿ ಶುಲ್ಕ:
ಮೀಸಲಾತಿ ರಹಿತ/ಒಬಿಸಿ ಗ್ರೂಪ್ ಬಿ ಹುದ್ದೆ: 200 ರು
ಮೀಸಲಾತಿ ರಹಿತ/ಒಬಿಸಿ ಗ್ರೂಪ್ ಸಿ ಹುದ್ದೆ: 100 ರು
ಎಸ್ ಸಿ/ ಎಸ್ಟಿ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ಕಾರ್ಯಕ್ಷಮತೆ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 20-07-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-08-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications