ಸಿಆರ್ ಪಿಎಫ್ ಕಾನ್ಸ್ ಟೇಬಲ್, ಎಸ್ ಐ, ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಿಆರ್ ಪಿಎಫ್ ಕಾನ್ಸ್ ಟೇಬಲ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 240 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಹಾಕಿ.
ಬೆಂಗಳೂರು, ಮಾರ್ಚ್. 28 : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 240 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಏಪ್ರಿಲ್ 6ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು ಮೇ 05 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ.[ಸಿಆರ್ ಪಿಎಫ್ ನಲ್ಲಿ 219 ಹುದ್ದೆಗಳಿವೆ, ಅರ್ಜಿ ಹಾಕಲು ಏ.25 ಕೊನೆ ದಿನ]

ಹುದ್ದೆಗಳು: 240
Sub Inspector / Overseer (Civil),135
Assistant Sub Inspector / Draughtsman,03
Constable / Mason,65
Constable / Plumber,11
Constable / Electrician,14
Constable / Carpenter,06
Constable / Painter,06
* ವಿದ್ಯಾರ್ಹತೆ
1. (ಎಸ್ ಐ )ವಿದ್ಯಾರ್ಹತೆ: ಸಬ್ ಇನ್ಸ್ ಪೆಕ್ಟರ್ (ಎಸ್ ಐ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಯಗಳಲ್ಲಿ ಮೂರು ವರ್ಷದ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
2. (ಎಸ್ ಐ) ವಿದ್ಯಾರ್ಹತೆ: ಸಿವಿಲ್/ಮೆಕಾನಿಕಲ್ ಇಂಜಿನಿಯರಿಂಗ್.
3. ಕಾನ್ಸ್ ಟೇಬಲ್ ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು ಹಾಗೂ ಐಟಿಐನಲ್ಲಿ ಒಂದು ವರ್ಷ ಅನುಭವ ಹೊಂದಿರಬೇಕು.;
* ವಯೋಮಿತಿ:
Sub Inspector/Overseer: 21 to 30 years
CT/Mason: 18 to 23 years
Constables: 18 to 23 years.
* ಅರ್ಜಿ ಶುಲ್ಕ:
1. ಸಬ್ ಇನ್ಸ್ ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಸಾಮಾನ್ಯ ಹಾಗೂ ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 200 ರು. ನಿಗದಿ ಮಾಡಲಾಗಿದೆ.
2. ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಹಾಗೂ ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 100 ರು. ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
3, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಇನ್ನು ಹೆಚ್ಚಿನ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications