CPCB Recruitment 2023: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 74 ಹುದ್ದೆ ಖಾಲಿ ಇವೆ
ಬೆಂಗಳೂರು, ಸೆಪ್ಟಂಬರ್ 22: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತು ಕೂಡಲೇ ಅರ್ಜಿ ಸಲ್ಲಿಸಬಹುದು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯಲ್ಲಿ ಒಟ್ಟು 74 ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಮುಂದಿನ ಅಕ್ಟೋಬರ್ 31 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಇದು ಉತ್ತಮ ಅವಕಾಶವಾಗಿದ್ದು, ಸುದಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆ ಪಡೆಯಲು ಬೇಕಾದ ಅರ್ಹತೆಗಳೇನು ಎಂಬೆಲ್ಲ ನೇಮಕಾತಿಯ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)
ಖಾಲಿ ಹುದ್ದೆ ಹೆಸರು: ಕನ್ಸಲ್ಟೆಂಟ್
ಖಾಲಿ ಹುದ್ದೆ ಸಂಖ್ಯೆ: ಒಟ್ಟು 74
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 31
ಉದ್ಯೋಗ ಸ್ಥಳ: ಭಾರತದಲ್ಲಿ

ಮಾಸಿಕ ವೇತನ ವಿವರ
ಕನ್ಸಲ್ಟೆಂಟ್ ಎ ಹುದ್ದೆಗೆ ಮಾಸಿಕ 60,000 ರೂಪಾಯಿ
ಕನ್ಸಲ್ಟೆಂಟ್ ಬಿ ಹುದ್ದೆಗೆ ಮಾಸಿಕ 80,000 ರೂಪಾಯಿ
ಕನ್ಸಲ್ಟೆಂಟ್ ಸಿ ಹುದ್ದೆಗೆ ಮಾಸಿಕ 1,00,000 ರೂಪಾಯಿ.
ಆಯ್ಕೆ ಹೇಗೆ ನಡೆಯಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆ ಎದುರಿಸಲಿದ್ದರೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರ ಸಂದರ್ಶನ ನಡೆಸಲಾಗುವುದು. ಇನ್ನೂ ಅರ್ಜಿ ಸಲ್ಲಿಕೆಗೆ ಯಾವುದೇ ಅಭ್ಯರ್ಥಿಗಳಿಗೆ ಶುಲ್ಕ ನಿಗದಿ ಮಾಡಿಲ್ಲ ಎಂದು ಮಂಡಳಿಯ ಅಧಿಸೂಚನೆ ತಿಳಿಸಿದೆ.
ನೆನಪಿಡಬೇಕಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಸೆಪ್ಟಂಬರ್ 20
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; ಅಕ್ಟೋಬರ್ 31












Click it and Unblock the Notifications