CEWACOR Recruitment 2023: ಕೇಂದ್ರ ಸರ್ಕಾರಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ವೇತನ ವಿವರ ನೋಡಿ

ಬೆಂಗಳೂರು, ಅಕ್ಟೋಬರ್ 03: ಕೇಂದ್ರೀಯ ಉಗ್ರಾಣ ನಿಗಮವು (CEWACOR) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕು.

ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಒಟ್ಟು ಆರು ಯಂಗ್ ಪ್ರೊಫೆಶನಲ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅಕ್ಟೋಬರ್ 4 ರ ಒಳಗಾಗಿ ಅರ್ಜಿ ಸಲ್ಲಿಸಬೇಕಿದೆ. ಈ ಮೂಲಕ ಸರ್ಕಾರಿ ನೌಕರಿ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

CEWACOR Recruitment 2023: Central Warehousing Corporation Invite Application For 6 Posts

ನೇಮಕಾತಿ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ಕೇಂದ್ರೀಯ ಉಗ್ರಾಣ ನಿಗಮ

ಹುದ್ದೆ ಹೆಸರು: ಯಂಗ್ ಪ್ರೊಫೆಶನಲ್

ಖಾಲಿ ಹುದ್ದೆ ಸಂಖ್ಯೆ: 06

ಮಾಸಿಕ ವೇತನ: 50,000 ರಿಂದ 60,000 ರೂಪಾಯಿ

ಉದ್ಯೋಗದ ಸ್ಥಳ: ಕರ್ನಾಟಕ ಸೇರಿ ಭಾರತದಲ್ಲಿ

ಯಂಗ್ ಪ್ರೊಫೆಶನಲ್ ಬ್ಯುಸಿನೆಸ್ ಡೆವಲಪ್​ಮೆಂಟ್ 4 ಹುದ್ದೆಗಳು ಖಾಲಿ ಇದ್ದರೆ, ಯಂಗ್ ಪ್ರೊಫೆಶನಲ್ ಕಮರ್ಷಿಯಲ್ ಹುದ್ದೆ ಮತ್ತು ಯಂಗ್ ಪ್ರೊಫೆಶನಲ್ (NBP & P) ಹುದ್ದೆಗಳು ತಲಾ ಒಂದು ಖಾಲಿ ಇವೆ.

CEWACOR Recruitment 2023: Central Warehousing Corporation Invite Application For 6 Posts

ಶೈಕ್ಷಣಿಕ ಅರ್ಹತೆ ಏನಿರಬೇಕು

ಸ್ನಾತಕೋತ್ತರ ಪದವಿ, ಎಂಬಿಎ, LLB, LLM, ಎಕನಾಮಿಕ್ಸ್​/ಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಮ್ಯಾನೇಜ್​ಮೆಂಟ್/ ಸ್ಟಾಟಿಸ್ಟಿಕ್ಸ್​ ಪಡೆದಿರುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ.

ವಯೋಮಿತಿ: ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ಕೇಂದ್ರೀಯ ಉಗ್ರಾಣ ನಿಗಮ ನೇಮಕಾತಿ ತಿಳಿಸಿದೆ. ಯಾವ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ.

ಆಯ್ಕೆ ಪ್ರಕ್ರಿಯೆ-ಪೋಸ್ಟಿಂಗ್ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ನಂತರ ನೇರ ಸಂದರ್ಶನ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಆಯ್ಕೆ ಆದವರಿಗೆ ಕೈತುಂಬ ವೇತನ ಉದ್ಯೋಗವನ್ನು ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ನೀಡಲಾಗುವುದು ಎಂದು ತಿಳಿಸಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+