CDCC Bank Recruitment 2023: ಸಿಡಿಸಿಸಿ ಬ್ಯಾಂಕ್‌ ನೇಮಕಾತಿ, ಅರ್ಜಿ ಸಲ್ಲಿಕೆ, ವೇತನ ವಿವರ

ಬೆಂಗಳೂರು, ಆಗಸ್ಟ್ 29: ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್​ನ (CDCC Bank) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಹುದ್ದೆಯಲ್ಲಿ ಆಸಕ್ತಿ ಇರುವವರು ಸೆಪ್ಟಂಬರ್ 20ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್​ನಲ್ಲಿ ನೇಮಕಾತಿ ಅಡಿಯಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್, ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳು ಖಾಲಿ ಇದ್ದು, ಭರ್ತಿ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ವೇತನ, ವಯೋಮಿತಿ, ಶೈಕ್ಷಣಿಕ ಅರ್ಹತೆ ಇನ್ನಿತರ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.

CDCC Bank Recruitment 2023 Apply Various Post Of CDCC Bank Before 20th

ನೇಮಕಾತಿ ಪೂರ್ಣ ವಿವರ

ಸಂಸ್ಥೆ- ಸಿಡಿಸಿಸಿ ಬ್ಯಾಂಕ್

ಖಾಲಿ ಹುದ್ದೆಗಳ ಸಂಖ್ಯೆ -125

ಹುದ್ದೆ ಹೆಸರು- ಸೆಕೆಂಡ್ ಡಿವಿಷನ್ ಕ್ಲರ್ಕ್, ಕಂಪ್ಯೂಟರ್ ಪ್ರೋಗ್ರಾಮರ್

ಉದ್ಯೋಗ ಸ್ಥಳ - ಮಂಗಳೂರು & ಕರ್ನಾಟಕದಲ್ಲಿ

ಅರ್ಜಿ ಸಲ್ಲಿಕೆ ಕಡೆ ದಿನ - ಸೆಪ್ಟಂಬರ್ 20

ಸೆಕೆಂಡ್ ಡಿವಿಷನ್ ಕ್ಲರ್ಕ್- 123

ಕಂಪ್ಯೂಟರ್ ಪ್ರೋಗ್ರಾಮರ್- 2

ವಿದ್ಯಾರ್ಹತೆ ಮಾಹಿತಿ

ಸಿಡಿಸಿಸಿ ಬ್ಯಾಂಕ್ ತಿಳಿಸಿರುವಂತೆ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಬಿಇ, ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಎಸ್‌ಸಿ, ಎಂಸಿಎ ಮಾಡಿರಬೇಕು. ಅಂತೆಯೇ ಸೆಕೆಂಡ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಪದವಿ , ಡಿಪ್ಲೊಮಾ, ಸ್ನಾತಕೋತ್ತರ ಪದವಿ ಮಾಡಿರುವುದು ಕಡ್ಡಾಯವಾಗಿದೆ.

CDCC Bank Recruitment 2023 Apply Various Post Of CDCC Bank Before 20th

ವಯಸ್ಸು ಎಷ್ಟಿರಬೇಕು

ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಇರಬೇಕು. ಅಂತವು ಅರ್ಜಿ ಸಲ್ಲಿಸಲು ಅರ್ಹರು ಎಂದು ಬ್ಯಾಂಕ್ ತಿಳಿಸಿದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಂಡದ ಅಭ್ಯರ್ಥಿಗಳಿಗೆ 05 ವರ್ಷ ತುಂಬಿರಬೇಕು.

ಅರ್ಜಿ ಶುಲ್ಕ

ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳ ಶುಲ್ಕ 590 ರೂ.

ಇತರ ಅಭ್ಯರ್ಥಿಗಳಿಗೆ 1180 ರೂ.ಶುಲ್ಕ

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ

ತಿಂಗಳ ಸಂಬಳ ವಿವರ

ಕಂಪ್ಯೂಟರ್ ಪ್ರೋಗ್ರಾಮರ್ ಸ್ಥಾನಕ್ಕೆ ರೂ.36,985 ರಿಂದ 89600 ರೂ.

ಸೆಕೆಂಡ್ ಡಿವಿಷನ್ ಕ್ಲರ್ಕ್ ಹುದ್ದೆಗೆ ರೂ.24,910 ರಿಂದ 55,655 ರೂ. ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳು ಸೂಕ್ತ ದಾಖಲೆಗ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ಇಲ್ಲಿನ ಅಧಿಕೃತ ವೆಬ್‌ಸೈಟ್ https://recruitment.scdccbank.com/ ಗೆ ಬೇಟಿ ನೀಡಿ ನೇರವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ https://scdccbank.com/ ಇಲ್ಲಿಗೆ ಬೇಟಿ ನೀಡಬಹುದು ಎಂದು ಬ್ಯಾಂಕ್ ತಿಳಿಸಿದೆ.g

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+