ಕೆನರಾ ಬ್ಯಾಂಕಿನಲ್ಲಿ 7 ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಡಿ. 18: ಕೆನರಾ ಬ್ಯಾಂಕಿನ ಕ್ಯಾನ್ ಬ್ಯಾಂಕ್ ಕ್ಯಾಪಿಟಲ್ ಫಂಡ್ ಲಿಮಿಟೆಡ್ ಬೆಂಗಳೂರು ಶಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಕೋರಿ ಪ್ರಕಟಣೆ ಹೊರಡಿಸಿದೆ. ಹಿರಿಯ ಉಪಾಧ್ಯಕ್ಷ, ಉಪಾಧ್ಯಕ್ಷ, ಸಹಾಯಕ ಉಪಾಧ್ಯಕ್ಷ, ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 28 ಕೊನೆ ದಿನಾಂಕವಾಗಿದೆ.
ಹುದ್ದೆಗಳ ವಿವರ
1.ಹಿರಿಯ ಉಪಾಧ್ಯಕ್ಷ: 1
2.ಉಪಾಧ್ಯಕ್ಷ: 1
3.ಸಹಾಯಕ ಉಪಾಧ್ಯಕ್ಷ: 3
4.ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ : 2

ವಯೋಮಿತಿ: 30/09/2015ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗೆ 35 ವರ್ಷ ಮೀರಿರಬಾರದು. ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ. ಕ್ರಮ ಸಂಖ್ಯೆ 2 30 ವರ್ಷ, ಕ್ರಮ ಸಂಖ್ಯೆ 3ಕ್ಕೆ 27 ವರ್ಷ, ಕ್ರಮ ಸಂಖ್ಯೆ 4ಕ್ಕೆ 27 ವರ್ಷ,
ವಿದ್ಯಾರ್ಹತೆ: ಕ್ರಮ ಸಂಖ್ಯೆ 1 ಹುದ್ದೆಗೆ ಚಾರ್ಟರೆಡ್ ಅಕೌಂಟಂಟ್, ಕ್ರಮ ಸಂಖ್ಯೆಯಿಂದ 2 ರಿಂದ 4 ರಿಂದ ಹುದ್ದೆಗಳಿಗೆ ಬಿಇ, ಬಿಟೆಕ್, ಎಂಬಿಎ, ಸಿಎ, ಐಸಿಡಬ್ಲ್ಯೂಎ, ಸಿಎಫ್ ಎ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಶುಲ್ಕ: 500 ರು : ಡಿಮ್ಯಾಂಡ್ ಡ್ರಾಫ್ಟ್ ಗಳನ್ನು "Canbank Venture Capital Fund Ltd" ಹೆಸರಿನಲ್ಲಿ ತೆಗೆಸಿಕೊಂಡು ಪಾವತಿಸಬಹುದು.
ಅರ್ಜಿ ಸಲ್ಲಿಸುವ ಬಗೆ: ತುಂಬಿದ ಅರ್ಜಿ ಹಾಗೂ ಶುಲ್ಕದ ಡಿಡಿ ಜೊತೆಗೆ ಕ್ಯಾನ್ ಬ್ಯಾಂಕ್ ವೆಂಚುರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್, ಬೆಂಗಳೂರು 560 001 ವಿಳಾಸಕ್ಕೆ ಕಳಿಸಬೇಕು.
ಅರ್ಜಿ ಕಳಿಸಲು ಕೊನೆ ದಿನಾಂಕ : 28/12/2015
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
(ಒನ್ ಇಂಡಿಯಾ ಸುದ್ದಿ)












Click it and Unblock the Notifications