BWSSB Jobs: ಮಾಪನ ಓದುಗ ಹುದ್ದೆಯ ನೌಕರರಿಗೆ 'ಜಲಪರಿವೀಕ್ಷಕ' ಹುದ್ದೆಗೆ ಬಡ್ತಿ, ಸ್ಥಳ ನಿಯುಕ್ತಿ

ಬೆಂಗಳೂರು, ಆಗಸ್ಟ್ 11: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ (BWSSB) ಮಾಪನ ಓದುಗ ಹುದ್ದೆಯಿಂದ ಜಲಪರಿವೀಕ್ಷಕ ಹುದ್ದೆಗೆ ಕಳೆದ ಮೂರು ವರ್ಷಗಳಲ್ಲಿ ಸ್ಥಾನವನ್ನ ಮುಂಬಡ್ತಿ ಹೊಂದಿದ್ದ 108 ನೌಕರರಿಗೆ ಸ್ಥಳ ನಿಯುಕ್ತಿಗೊಳಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.

ಮಂಡಳಿಯ ವೃಂದ, ನೇಮಕಾತಿ, ಬಡ್ತಿ (ತಿದ್ದುಪಡಿ) ನಿಬಂಧನೆಗಳು-2016 ಹಾಗೂ ದಿನಾಂಕ: 13.07.2022ರ ಪುನರ್‌ವಿನ್ಯಾಸದ ಅಧಿಸೂಚನೆಯ ಅನುಸಾರ ಮಾಪನ ಓದುಗ ಹುದ್ದೆಯಿಂದ ಜಲಪರಿವೀಕ್ಷಕ ಹುದ್ದೆಗೆ 2021, 2022 ಹಾಗೂ 2023 ಈ ಮೂರು ವರ್ಷಗಳಲ್ಲಿ ಮುಂಬಡ್ತಿ ನೀಡಿ ಆದೇಶ ನೀಡಲಾಗಿತ್ತು.

BWSSB Placement Order To Water Inspector Who got Promotion from Measurement Reader Post

ಈ ಹಿಂದೆ ಮಾಪನ ಓದುಗರ ಕೊರತೆಯಿದ್ದ ಹಿನ್ನಲೆಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿಯೇ ಮಾಪನ ಓದುಗ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸುವಂತೆ ಜಲಮಂಡಳಿ ಅಧ್ಯಕ್ಷರು ಆದೇಶದಲ್ಲಿ ಸೂಚಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಜಲಪರಿವೀಕ್ಷಕರಾಗಿ ಬಡ್ತಿ ಹೊಂದಿದ್ದ ನೌಕರರು, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗಿದ್ದ ಸಂಧರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಪರಿಸ್ಥಿತಿ ನಿಭಾಯಿಸುವಲ್ಲಿ ಇವರೆಲ್ಲ ಪ್ರಮುಖ ಪಾತ್ರವಹಿಸಿದ್ದರು ಎಂದು ತಿಳಿಸಲಾಗಿದೆ.

ಹೆಚ್ಚುವರಿ ಹುದ್ದೆಗೆ ನಿರ್ವಹಣೆಗೆ ಸೂಚನೆ

ನಿಯುಕ್ತಿ ಇವರಿಗೆ ಪ್ರೋತ್ಸಾಹ ನೀಡುವ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಎಲ್ಲಿಲ್ಲಿ ಮಾಪನ ಓದುಗರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅದೇ ಸ್ಥಳದಲ್ಲಿಯೇ ಜಲಪರಿವೀಕ್ಷಕರ ಹುದ್ದೆಯಲ್ಲಿ ನಿಯುಕ್ತಿಗೊಳಿಸಲಾಗಿದೆ. ಜೊತೆಗೆ ಜಲಪರಿವೀಕ್ಷಕ ಹುದ್ದೆಯ ಕರ್ತವ್ಯಗಳ ಹಾಗೂ ಮಾಪನ ಓದುಗ ಹುದ್ದೆಯ ಕರ್ತವ್ಯಗಳನ್ನು ಹೆಚ್ಚುವರಿಯಾಗಿ ನಿರ್ವಹಿಸುವಂತೆ ಅಧ್ಯಕ್ಷರು ನಿಯುಕ್ತ ಆದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ವರ್ಗಾವಣೆಯ ನಿಯಮಗಳ ಅಡಿಯಲ್ಲಿ ಮಂಡಳಿಯ ಸಿ ಮತ್ತು ಡಿ ವರ್ಗದ ನೌಕರರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರದ ವರ್ಗಾವಣೆ ನಿಯಮಗಳ ಪ್ರಕಾರ ನಿಗದಿಪಡಿಸಲಾದ ಶೇಕಡಾ 6ರ ಮಿತಿಗೆ ಒಳಪಟ್ಟು 31.07.2024 ರಂದು ಅನುಮೋದಿಸಲಾಗಿದೆ. ಅದರಂತೆ, ಜಲಮಂಡಳಿಯ ಕಾರ್ಯದರ್ಶಿಗಳು ವರ್ಗಾವಣೆ ಆಗಿರುವ ನೌಕರರಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಮಾಡಿದ್ದಾರೆ ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+