BSF ನೇಮಕಾತಿ: ಪಿಯು ಪಾಸಾದವರಿಗೆ 92K ತನಕ ಸಂಬಳ
ನವದೆಹಲಿ, ಆಗಸ್ಟ್ 9: ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ಅಧಿಕೃತ ವೆಬ್ ತಾಣದಲ್ಲಿ 2022ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಸ್ಟೆನೋಗ್ರಾಫರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 6, 2022ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Border Security Force
ಹುದ್ದೆ ಹೆಸರು: Assistant Sub Inspector(Stenographer),Head Constable(Ministerial)
ಒಟ್ಟು ಹುದ್ದೆ: 323
ASI (Stenographer): 11 ಹುದ್ದೆಗಳು
HC(Ministerial): 312 ಹುದ್ದೆಗಳು
ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 6, 2022
ಹುದ್ದೆ-ವೇತನ ವಿವರ:
ASI (Stenographer)
ವೇತನ ಶ್ರೇಣಿ: 29,200-92,300ರು / ಲೆವಲ್ -5
HC(Ministerial)
ವೇತನ ಶ್ರೇಣಿ: 25,500 - 81,100 ರು / ಲೆವಲ್ -4
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಪ್ಲೋಮಾ ಪಡೆದಿರಬೇಕು.

ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ.
ಗರಿಷ್ಠ ವಯಸ್ಸು: 25 ವರ್ಷ.
ಗಡಿ ಭದ್ರತಾ ಪಡೆಯಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ನಿಗದಿತ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ. ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳಾಗಿದ್ದರೆ, ಗರಿಷ್ಠ ವಯೋಮಿತಿಯು 25 ವರ್ಷವಾಗಿದೆ.
ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆ ಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಹಾಗೂ 1984ರ ಗಲಭೆ ಪೀಡಿತರು ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ನೇಮಕಾತಿ ಪ್ರಕ್ರಿಯೆ: ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ. ಸ್ಟೆನೊ ಹುದ್ದೆಗಳಿಗೆ ಸ್ಪೀಡ್ ಟೆಸ್ಟ್ ಇರಲಿದೆ.

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿ: 100 ರು
ಮಹಿಳಾ/ ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಅಥವಾ ಇ ಚಲನ್ ಮೂಲಕ ಪಾವತಿಸಬಹುದು.
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 08/08/2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ; 06/09/2022
ಅರ್ಜಿ ಸಲ್ಲಿಸುವುದು ಹೇಗೆ?:
* ಬಿಎಸ್ಎಫ್ ಗ್ರೂಪ್ ಬಿ ಇಂಜಿನಿಯರಿಂಗ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ (https://rectt.bsf.gov.in/)ಕ್ಕೆ ಭೇಟಿ ನೀಡಿ ಸೂಕ್ತ ಅರ್ಜಿ ನಮೂನೆ ಆಯ್ಕೆ ಮಾಡಿಕೊಳ್ಳಿ
* ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕಚೇರಿಗೆ ಯಾವುದೇ ರೀತಿ ಪತ್ರ ಅಥವಾ ಅರ್ಜಿಯಲ್ಲಿ ಬದಲಾವಣೆಗೆ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ.
* ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ನೀಡಿ ನೋಂದಾಯಿಸಿಕೊಳ್ಳುವುದು ಮುಖ್ಯ. ಬಿಎಸ್ಎಫ್ ನಿಂದ ಅಧಿಕೃತ ಸಂದೇಶಗಳು ಮೊಬೈಲ್ ಹಾಗೂ ಮೇಲ್ ಐಡಿಗೆ ಬರಲಿದೆ.
* ಕ್ರೀಡಾ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಲು ಸೂಕ್ತವಾದ ದಾಖಲೆ ಒದಗಿಸಬೇಕಾಗುತ್ತದೆ. ಮಾಜಿ ಯೋಧರಿಗೆ ಮೀಸಲಾತಿ ಇರಲಿದೆ.
ನೇಮಕಾತಿ ಕುರಿತಂತೆ ನೋಟಿಫಿಕೇಷನ್ ಇಲ್ಲಿ ಓದಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ (docs.bsf.gov.in )












Click it and Unblock the Notifications