Namma Metro; ನಮ್ಮ ಮೆಟ್ರೋ ನೇಮಕಾತಿ, 8 ಹುದ್ದೆ, ವೇತನ
ಬೆಂಗಳೂರು, ಸೆಪ್ಟೆಂಬರ್ 26; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ 25/10/2023ರ ತನಕ ಅರ್ಜಿ ಸಲ್ಲಿಕೆ ಮಾಡಬೇಕು. ಅಗತ್ಯ ದಾಖಲೆಗಳ ಜೊತೆ ಸಹಿ ಮಾಡಿದ ಪ್ರತಿಗಳನ್ನು ಸ್ವೀಕಾರ ಮಾಡಲು ಕೊನೆಯ ದಿನಾಂಕ 30/10/2023 ಸಂಜೆ 4 ಗಂಟೆ ಆಗಿದೆ.
ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ನೇಮಕಾತಿಯ ಅವಧಿ 1-3 ವರ್ಷಗಳು. 1 ರಿಂದ 3 ತಿಂಗಳ ನೋಟಿಸ್ ಪಿರಿಯಡ್ ನೀಡಿ ಹುದ್ದೆಯಿಂದ ತೆಗೆಯಬಹುದಾಗಿದೆ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ನೇಮಕಾತಿಗೆ ಅರ್ಹತೆ ಹೊಂದಿರುವ ಸೇವೆಯಲ್ಲಿರುವ/ ನಿವೃತ್ತ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿ, ನೇಮಕಾತಿ ಅಧಿಸೂಚನೆ ಮುಂತಾದ ಮಾಹಿತಿಗಾಗಿ www.bmrc.co.in ವೆಬ್‌ಸೈಟ್‌ನಲ್ಲಿ ಕೆರಿಯರ್ ಸೆಕ್ಷನ್‌ಗೆ ಭೇಟಿ ನೀಡಬಹುದಾಗಿದೆ.
ಯಾವ-ಯಾವ ಹುದ್ದೆಗಳು; ಬಿಎಂಆರ್‌ಸಿಎಲ್ ಮುಖ್ಯ ಅಭಿಯಂತರರು (ವಿದ್ಯುತ್) 1, ಅಪರ ಮುಖ್ಯ ಅಭಿಯಂತರರು (ಟ್ರ್ಯಾಕ್ಷನ್ & ಆರ್‌ಎಸ್‌ಎಸ್) 2, ಅಪರ ಮುಖ್ಯ ಅಭಿಯಂತರರು (ಸಿಸ್ಟಂ ಕಾಂಟ್ರಕ್ಟ್) 1, ಅಪರ ಮುಖ್ಯ ಅಭಿಯಂತರರು (ಆಪರೇಷನ್ ಸೇಫ್ಟಿ) 1, ಅಪರ ಮುಖ್ಯ ಅಭಿಯಂತರರು ( ಇಸಿಎಸ್/ ಟಿವಿಎಸ್) 1, ಅಪರ ಮುಖ್ಯ ಅಭಿಯಂತರರು (ಸಿಗ್ನಲಿಂಗ್) 1, ಕಾರ್ಯ ನಿರ್ವಾಹಕ ಅಭಿಯಂತರರು (ಸಿಗ್ನಲಿಂಗ್) 1 ಸೇರಿ ಒಟ್ಟು 8 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ವೇತನ ಶ್ರೇಣಿ (ಸೇವೆಯಲ್ಲಿರುವವರಿಗೆ). ಮುಖ್ಯ ಅಭಿಯಂತರರು ವಯೋಮಿತಿ ಗರಿಷ್ಠ 58, ವೇತನ 1,65,000 ರೂ.ಗಳು. ವಯೋಮಿತಿ ಗರಿಷ್ಠ 55 ವರ್ಷಗಳು, ವೇತನ ಶ್ರೇಣಿ 1,50,000 ರೂ.ಗಳು. ಅಪರ ಮುಖ್ಯ ಅಭಿಯಂತರರು ವಯೋಮತಿ ಗರಿಷ್ಠ 50 ವರ್ಷಗಳು, ವೇತನ ಶ್ರೇಣಿ 1,40,000 ರೂ.ಗಳು. ಕಾರ್ಯ ನಿರ್ವಾಹಕ ಅಭಿಯಂತರರು ವಯೋಮಿತಿ 45 ವರ್ಷಗಳು ಗರಿಷ್ಠ. ವೇತನ ಶ್ರೇಣಿ 85,000 ರೂ.ಗಳು.
ವೇತನ ಶ್ರೇಣಿ (ನಿವೃತ್ತ ಅಧಿಕಾರಿಗಳಿಗೆ). ಎಲ್ಲಾ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 62 ವರ್ಷಗಳು. ಮುಖ್ಯ ಅಭಿಯಂತರರು ವೇತನ 1,40,000 ರೂ.ಗಳು. ಅಪರ ಮುಖ್ಯ ಅಭಿಯಂತರರು ವೇತನ ಶ್ರೇಣಿ 1,25,000 ರೂ.ಗಳು. ಕಾರ್ಯ ನಿರ್ವಾಹಕ ಅಭಿಯಂತರರು ವೇತನ ಶ್ರೇಣಿ 1,10,000 ರೂ.ಗಳು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಬಳಿಕ ಅದಕ್ಕೆ ಬೇಕಾಗಿರುವ ದಾಖಲಾತಿಗಳೊಂದಿಗೆ ಸಹಿ ಮಾಡಿದ ಪ್ರತಿಗಳನ್ನು30/10/2023ರ ಸಂಜೆ 4 ಗಂಟೆಯೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬೇಕು.
General Manager (HR),
Bangalore Metro Rail Corporation Limited,
III Floor, BMTC Complex, K.H. Road,
Shanthinagar, Bengaluru 560027
ಸಲ್ಲಿಕೆ ಮಾಡುವ ಅರ್ಜಿಯ ಎನೋಲಪ್ ಕವರ್ ಮೇಲೆ APPLICATION FOR THE POST OF ಎಂದು ಯಾವ ಹುದ್ದೆಗೆ ಅರ್ಜಿ ಹಾಕುತ್ತದೆಯೋ ಆ ಹುದ್ದೆ ಹೆಸರು ಬರೆಯಬೇಕು.












Click it and Unblock the Notifications