'ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ
ಬೆಂಗಳೂರು, ಮೇ 25: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜಂಟಿ ಯೋಜನೆಯಾದ ಮೆಟ್ರೋ ರೈಲು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಸಿಸ್ಟೆಂಟ್ ಮ್ಯಾನೇಜರ್ 04 ಮತ್ತು 08 ಕಾರ್ಯನಿರ್ವಾಹಕ ಸಹಾಯಕ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಬಿಎಂಆರ್ ಸಿಲ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 17-06-2017, 04:00 PMರೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.[ಎಚ್ಎಂಟಿಯಲ್ಲಿ ಮ್ಯಾನೇಜರ್ ಹುದ್ದೆ ಖಾಲಿ, ಕೂಡಲೆ ಅರ್ಜಿ ಹಾಕಿ]
ವಯೋಮಿತಿ: ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ 40 ವರ್ಷ ಹಾಗೂ ಕಾರ್ಯನಿರ್ವಾಹಕ ಸಹಾಯಕ ಹುದ್ದೆಗೆ 32 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ: * ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ
ವಿಶ್ವವಿದ್ಯಾಯಲಗಳಲ್ಲಿ ಪದವಿಯಲ್ಲಿ CA / ICWA OR M. Com / MBA (Finance) ಪೂರ್ಣಗೊಳಿಸಿರಬೇಕು.
* ಕಾರ್ಯನಿರ್ವಾಹಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ, ಬಿಬಿಎಂ, ಬಿಸಿಎ, ಬಿಬಿಎ ತೇರ್ಗಡೆಯಾಗಿರಬೇಕು.
ಆಯ್ಕೆ ವಿಧಾನ: ಮೇಲೆ ತಿಳಿಸಿರುವ ಹುದ್ದೆಗಳಿಗೆ ಲಿಖತ ಪರೀಕ್ಷೆ ಮತ್ತು ವೈಯಕ್ತಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇನ್ನು ಹೆಚ್ಚಿನ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications