ಬಿಎಚ್ಇಎಲ್ ನೇಮಕಾತಿ 2022: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿವೆ
ಬೆಂಗಳೂರು, ಸೆಪ್ಟೆಂಬರ್ 20: ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್ (ಬಿಎಚ್ಇಎಲ್) ನಲ್ಲಿ 150ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದಾಗಿದೆ. ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಜಿ ಹಾಕುವವರು ಅಕ್ಟೋಬರ್ 04, 2022ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್ (ಬಿಎಚ್ಇಎಲ್)
ಒಟ್ಟು ಹುದ್ದೆಗಳ ಸಂಖ್ಯೆ: 150
ಹುದ್ದೆ ಹೆಸರು: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ
ಹುದ್ದೆ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04 ಅಕ್ಟೋಬರ್ 2022
ಒಟ್ಟು ಹುದ್ದೆ: 150
ಮೆಕ್ಯಾನಿಕಲ್: 30
ಎಲೆಕ್ಟ್ರಿಕಲ್: 15
ಸಿವಿಎಲ್: 40
ಕೆಮಿಕಲ್: 10
ಎಚ್ ಆರ್:10
ಫೈನಾನ್ಸ್: 20
ಐಟಿ/ಕಂಪ್ಯೂಟರ್ ಸೈನ್ಸ್: 20
ಮೆಟಲರ್ಜಿ ಇಂಜಿನಿಯರಿಂಗ್: 05
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಇಂಜಿನಿಯರಿಂಗ್ ಪದವಿ (ಅಥವಾ 5 ವರ್ಷಗಳ ಸ್ನಾತಕೋತ್ತರ ಪದವಿ. ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು ಪದವಿಯಲ್ಲಿ ಶೇ 60ರಷ್ಟು ಪಡೆದಿರಬೇಕು. ಅರ್ಹ ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು ಎಂದು ನಿಗದಿಯಾಗಿದೆ.
ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ 2 ವರ್ಷಗಳ ಸೇವಾವಧಿ ಅನುಭವ ಹೊಂದಿದ್ದವರಿಗೆ ಆದ್ಯತೆ. ತಾಂತ್ರಿಕವಾಗಿ ಬೇಸಿಕ್ ಕಂಪ್ಯೂಟರ್ ಜ್ಞಾನ, ಆಟೋ ಕ್ಯಾಡ್, ಎಂಎಸ್ ಪ್ರಾಜೆಕ್ಟ್ ತಿಳಿದಿರಬೇಕು.

ಎಕ್ಸಿಕ್ಯೂಟಿವ್ ಟ್ರೈನಿ (HR): ಎರಡು ವರ್ಷಗಳ ಪೂರ್ಣಾವಧಿ ನಿಯಮಿತ ಪಿಜಿ ಪದವಿ/ಡಿಪ್ಲೊಮಾ (ಸಂಬಂಧಿತ ವಿಭಾಗಗಳು) ಜೊತೆಗೆ ಕನಿಷ್ಠ 60% ಅಂಕಗಳೊಂದಿಗೆ ಪೂರ್ಣ ಸಮಯದ ನಿಯಮಿತ ಪದವಿ
ಕಾರ್ಯನಿರ್ವಾಹಕ ಟ್ರೈನಿ (ಹಣಕಾಸು): ಭಾರತದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಅರ್ಹ ಚಾರ್ಟರ್ಡ್ ಅಥವಾ ವೆಚ್ಚ ಮತ್ತು ವರ್ಕ್ಸ್ ಅಕೌಂಟೆಂಟ್‌ಗಳೊಂದಿಗೆ ಪೂರ್ಣ ಸಮಯದ ನಿಯಮಿತ ಪದವಿ.
ವಯೋಮಿತಿ :
ಸಾಮಾನ್ಯ ವರ್ಗ :
ಇಂಜಿನಿಯರ್ ಟ್ರೈನಿ: 27 ವರ್ಷ
ಇಂಜಿನಿಯರ್ ಟ್ರೈನಿ (ಪಿಜಿ ಹೊಂದಿದವರು) 29 ವರ್ಷ
ಎಕ್ಸಿಕ್ಯೂಟಿವ್ ಟ್ರೈನಿ: 29 ವರ್ಷ
ಒಬಿಸಿ : ಕೆನೆಪದರ ರಹಿತ 3 ವರ್ಷ ವಿನಾಯಿತಿ
ಎಸ್ ಸಿ/ ಎಸ್ಟಿ : 5 ವರ್ಷ ವಿನಾಯಿತಿ
ದಿವ್ಯಾಂಗ (ಸಾಮಾನ್ಯ): 10 ವರ್ಷ ವಿನಾಯಿತಿ
ದಿವ್ಯಾಂಗ (ಒಬಿಸಿ): 13 ವರ್ಷ (ಕೆನೆಪದರ ರಹಿತ)
ದಿವ್ಯಾಂಗ (ಎಸ್ ಸಿ/ ಎಸ್ ಟಿ): 15 ವರ್ಷ.
ಸರ್ಕಾರದ ಮಾರ್ಗಸೂಚಿಯಂತೆ ಮಾಜಿ ಯೋಧ ಅಭ್ಯರ್ಥಿಗಳಿಗೂ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ, ದಿವ್ಯಾಂಗ ಅಭ್ಯರ್ಥಿ ಹೊರತುಪಡಿಸಿ ಮಿಕ್ಕ ಅಭ್ಯರ್ಥಿಗಳಿಗೆ 300 ರು.
ಸಾಮಾನ್ಯ/ ಆರ್ಥಿಕವಾಗಿ ಹಿಂದುಳಿದ/ ಒಬಿಸಿ: 800 ರು
ಅರ್ಜಿ ಶುಲ್ಕ ಪಾವತಿ; ಎಸ್ ಬಿಐ ಕಲೆಕ್ಟ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ /ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್.. ಇತ್ಯಾದಿ
ಮುಖ್ಯ ದಿನಾಂಕಗಳು:
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 04/10/2022
ಪರೀಕ್ಷೆ ದಿನಾಂಕ: 31/10/2022 ಹಾಗೂ 2/11/2022
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಹ, ಆಸಕ್ತ ಅಭ್ಯರ್ಥಿಗಳು ಸೂಕ್ತ ಅರ್ಜಿ ಮಾದರಿಯನ್ನು ಬಿಎಚ್ಇಎಲ್ ವೆಬ್ ತಾಣ(https://careers.bhel.in/)ದಿಂದ ಪಡೆದುಕೊಂಡು ಭರ್ತಿ ಮಾಡಿ ಆನ್ ಲೈನ್ ಮೂಲಕ ಸಲ್ಲಿಸತಕ್ಕದ್ದು. ಭರ್ತಿ ಮಾಡಿದ ಅರ್ಜಿ ಜೊತೆಗೆ ಅಗತ್ಯ ದಾಖಲೆ ಪತ್ರಗಳನ್ನು ಲಗತ್ತಿಸಿರತಕ್ಕದ್ದು.
ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಡಿಪ್ಲೋಮಾ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
ಅರ್ಜಿ ಸಲ್ಲಿಸುವ ವಿಧಾನ:
*ಮೊದಲನೆಯದಾಗಿ BHEL ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ .
ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
* ಮೇಲಿನ ಲಿಂಕ್‌ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
* ಶುಲ್ಕ ಪಾವತಿ ನಿಮಗೆ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
* ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
* ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications