Gram Panchayat Jobs: ಬೆಂಗಳೂರಿನಲ್ಲಿ ಸರ್ಕಾರಿ ಕೆಲಸ ಖಾಲಿ ಇದೆ

ಬೆಂಗಳೂರು, ಜುಲೈ 31: ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಅತ್ಯುತ್ತಮ ಅವಕಾಶ ಇಲ್ಲಿದೆ. ಬೆಂಗಳೂರು ನಗರ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ನಗರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 6 ಲೈಬ್ರರಿ ಸೂಪರ್​ವೈಸರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಆಫ್‌ಲೈನ್ (ಪೋಸ್ಟ್, ಇತ್ಯಾದಿ) ಮೂಲಕ ಆಗಸ್ಟ್ 13ರೊಳಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ ವರೆಗೂ ಕಾಯದೇ ಅಧಿಸೂಚನೆ ಓದಿಕೊಂಡು ಈಗಲೇ ಅರ್ಜಿ ಹಾಕಿದರೆ ಒಳಿತು. ಅರ್ಜಿ ಸಲ್ಲಿಸುವವರು ಈ ಕೆಳಗಿನ ಮಾಹಿತಿಯನ್ನು ತಪ್ಪದೇ ಗಮನಿಸಬೇಕು.

Bengaluru Urban Gram Panchayat Recruitment Eligible Candidates can Apply 6 Library Supervisor Posts

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: ಬೆಂಗಳೂರು ನಗರ ಗ್ರಾಮ ಪಂಚಾಯಿತಿ

ಹುದ್ದೆಗಳ ಹೆಸರು: ಲೈಬ್ರರಿ ಸೂಪರ್​ವೈಸರ್

ಒಟ್ಟು ಹುದ್ದೆ: ಒಟ್ಟು 6

ಪೊಸ್ಟಿಂಗ್: ಬೆಂಗಳೂರು

ಮಾಸಿಕ ವೇತನ: 15,196 ರೂಪಾಯಿ

ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 13

ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್

ವಿದ್ಯಾರ್ಹತೆ ವಿವರ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ, ಲೈಬ್ರರಿ ಸೈನ್ಸ್​ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಪೂರ್ಣಗೊಳಿಸಿರಬೇಕು ಎಂದು ಬೆಂಗಳೂರು ನಗರ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ತಿಳಿಸಿದೆ.

ವಯಸ್ಸಿನ ಮಿತಿ ಮಾಹಿತಿ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಕೆ ಕೊನೆ ದಿನ ಆಗಸ್ಟ್ 13, ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು ಎಂದು ನಿಗದಿ ಮಾಡಲಾಗಿದೆ. ಈ ವಯೋಮಾನದವರು ಅರ್ಜಿ ಸಲ್ಲಿಸಬಹುದು.

Bengaluru Urban Gram Panchayat Recruitment Eligible Candidates can Apply 6 Library Supervisor Posts

ಇನ್ನೂ ವಯೋಮಿತಿಯಲ್ಲಿ ಯಾರಿಗೆಲ್ಲ ಸಡಿಲಿಕೆ ಎಂದು ನೋಡುವುದಾದರೆ, ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-I ಅಭ್ಯರ್ಥಿಗಳಿಗೆ 05 ವರ್ಷವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಆಯ್ಕೆ ಆಗುವವರಿಗೆ ಮಾಸಿಕವಾಗಿ ಮಾಸಿಕ 15,196 ರೂ.ವೇತನ ಸಹಿತ ಬೆಂಗಳೂರಿನ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟಿದೆ?

ಅರ್ಜಿ ಶುಲ್ಕದ ಮಾಹಿತಿ ನೋಡುವುದಾದರೆ, PWD ಅಭ್ಯರ್ಥಿಗಳಿಗೆ ರೂ.100 ನಿಗದಿ ಮಾಡಲಾಗಿದೆ. ಉಳಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ /ಪ್ರವರ್ಗ-I/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.200 ನಿಗದಿ ಮಾಡಲಾಗಿದೆ. ಇನ್ನೂ ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.300 ಹಾಗೂ ಸಾಮಾನ್ಯ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕವನ್ನು ಚಲನ್ ಮೂಲಕ ಪಾವತಿಸಬೇಕಿದೆ.

ಅರ್ಜಿ ಸಲ್ಲಿಕೆಯ ವಿಳಾಸ

ಈ ಕೂಡಲೇ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳ ಸಮೇತ ಭರ್ತಿ ಮಾಡಿದ ಅರ್ಜಿಯನ್ನು ''ಆಯಾ ಗ್ರಾಮ ಪಂಚಾಯತ್ ಕಛೇರಿ, ಬೆಂಗಳೂರು ನಗರ, ಕರ್ನಾಟಕ'' ಇಲ್ಲಿಗೆ ಆಗಸ್ಟ್ 13 ರೊಳಗೆ ಅಂಚೆ ಮೂಲಕ ತಲುಪಿಸಬೇಕು ಎಂದು ಅಧಿಸೂಚನೆಯು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+