BEL Recruitment 2023: ಬೆಂಗಳೂರಿನಲ್ಲಿ ₹90,000 ವೇತನದ ಕೆಲಸ ಖಾಲಿ ಇದೆ, ಅರ್ಜಿ ಸಲ್ಲಿಕೆಗೆ ಸೆ.5 ಕಡೆ ದಿನ
ಬೆಂಗಳೂರು, ಆಗಸ್ಟ್ 17: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Jobs) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಈ ಸಲುವಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿಯೇ ಕೈ ತುಂಬ ಸಂಬಳದ ಕೆಲಸ ಹುಡುಕಿತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತರು ಮುಂದಿನ ಸೆಪ್ಟೆಂಬರ್ 5ರೊಳಗೆ ಅರ್ಜಿ ಹಾಕುವಂತೆ ತಿಳಿಸಲಾಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Jobs) ನಲ್ಲಿ ಒಟ್ಟು 63 ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ, ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಅದಕ್ಕು ಮುನ್ನ ಇಲ್ಲಿ ನೀಡಲಾದ ಹುದ್ದೆ ಕುರಿತ ವಿವರ, ವಿದ್ಯಾರ್ಹತೆ ಏನು?, ಸಂಬಳ ಎಷ್ಟು? ಎಂಬ ಎಲ್ಲ ಮಾಹಿತಿ ತಿಳಿದುಕೊಳ್ಳಿ.

ನೇಮಕಾತಿ ವಿವರ
ಒಟ್ಟು ಹುದ್ದೆ- 63
ಹುದ್ದೆ ಹೆಸರು - ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ, ಟೆಕ್ನಿಷಿಯನ್
ಉದ್ಯೋಗದ ಸ್ಥಳ - ಬೆಂಗಳೂರು
ಮಾಸಿಕ ವೇತನ- 90,000ವರೆಗೆ
ಅರ್ಜಿ ಸಲ್ಲಿಕೆ ಕಡೆಯ ದಿನ -ಸೆಪ್ಟೆಂಬರ್ 5
ಇನ್ನೂ ವಿಭಾಗವಾರು ಹುದ್ದೆಗಳನ್ನು ನೋಡುವುದಾದರೆ, ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ ವಿಭಾಗದಲ್ಲಿ ಒಟ್ಟು 16 ಹುದ್ದೆಗಳು ಖಾಲಿ ಇದ್ದರೆ, ಟೆಕ್ನಿಷಿಯನ್ ನಲ್ಲಿ 44 ಮತ್ತು ಕಿರಿಯ ಸಹಾಯಕ (ಜೂನಿಯರ್ ಅಸಿಸ್ಟೆಂಟ್) ಮೂರು ಹುದ್ದೆಗಳು ಖಾಲಿ ಇವೆ ಎಂದು ತಿಳಿಸಲಾಗಿದೆ.

ಶೈಕ್ಷಣಿಕ ಅರ್ಹತೆ
ಅಧಿಸೂಚನೆ ಪ್ರಕಾರ, ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ ಹುದ್ದೆಗೆ ಕಂಪ್ಯೂಟರ್ ಸೈನ್ಸ್ ಅಥವಾ ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, ಟೆಕ್ನಿಷಿಯನ್ ಹುದ್ದೆಗೆ 10ನೇ ತರಗತಿ, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರಿಕಲ್, ಡ್ರಾಟ್ಸ್ಮ್ಯಾನ್ (ಮೆಕ್ಯಾನಿಕಲ್) ವಿಭಾಗದಲ್ಲಿ ITI ಆಗಿರಬೇಕು. ಇನ್ನೂ ಕಿರಿಯ ಸಹಾಯಕ ಹುದ್ದೆಗೆ ಬಿ.ಕಾಂ, ಬಿಬಿಎಂ ಪದವಿ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ.
ವಯಸ್ಸಿನ ಮಿತಿ-ಸಡಿಲಿಕೆ ವಿವರ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ 2023ರ ಆಗಸ್ಟ್ 01ಕ್ಕೆ ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷ ಮೀರಿರಬಾರದು. ಹಿಂದುಳಿದ ವರ್ಗದವರಿಗೆ (ಒಬಿಸಿ-NCL) ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ PwBD ಅಭ್ಯರ್ಥಿಗಳು ಒಟ್ಟು 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಹೇಳಿದೆ.
ಮಾಸಿಕ ವೇತನ ಎಷ್ಟು?
ಆಯ್ಕೆ ಆಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತಿದೆ. ಅಂದರೆ ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ ಹುದ್ದೆಗೆ ಆಯ್ಕೆ ಆಗುವವರಿಗೆ ಮಾಸಿಕ 24,500-90,000 ರೂಪಾಯಿ, ಟೆಕ್ನಿಷಿಯನ್ ಗೆ ಮಾಸಿಕ 21,500- 82,000 ರೂಪಾಯಿ ಹಾಗೂ ಕಿರಿಯ ಸಹಾಯಕ ಹುದ್ದೆಗೆ ಮಾಸಿಕ 21,500- 82,000 ರೂಪಾಯಿ ನಿಗದಿ ಮಾಡಲಾಗಿದೆ.
ಎಸ್‌ಸಿ-ಎಸ್‌ಟಿ ಮತ್ತು PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ/ ಒಬಿಸಿ/ EWS ಅಭ್ಯರ್ಥಿಗಳಿಗೆ 250 ರೂಪಾಯಿ ಇರಲಿದ್ದು, ಇದನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಿದೆ. ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ನಂತರ ನೇರ ಸಂದರ್ಶನ ಇರಲಿದೆ. ಆಯ್ಕೆಯಾಗುವವರಿಗೆ ಬೆಂಗಳೂರಿನಲ್ಲಿಯೇ ಪೊಸ್ಟಿಂಗ್ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್ https://jobapply.in/BEL2023JalahaliEATTech/ ಗೆ ಭೇಟಿ ನೀಡುವಂತೆ ಕೋರಲಾಗಿದೆ.












Click it and Unblock the Notifications