Bank Jobs: ಬ್ಯಾಂಕ್ ನೇಮಕಾತಿ, ಬರೋಬ್ಬರಿ 1267 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರ

ಬೆಂಗಳೂರು, ಜನವರಿ 15: ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಅರ್ಹ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಇಲ್ಲಿದೆ. ಭಾರತದ ಸರ್ಕಾರದ ಸಾರ್ವಜನಿಕ ವಲಯದ ಪ್ರಮುಖ ಭ್ಯಾಂಕ್ ಆಗಿರುವ 'ಬ್ಯಾಂಕ್ ಆಫ್ ಬರೋಡಾ' ಇತ್ತೀಚೆಗೆ ವಿವಿಧ ವಿಭಾಗಗಳಲ್ಲಿ ನೇಮಕಾತಿ ಆರಂಭಿಸಿದೆ. ಈ ನಿಮಿತ್ತ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದೆ ಜನವರಿ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

'ಬ್ಯಾಂಕ್ ಆಫ್ ಬರೋಡಾ' ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಬ್ಯಾಂಕ್‌ನಲ್ಲಿ 1267 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತ ಅಭ್ಯರ್ಥಿಗಳು ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Bank of Baroda Recruitment Invited Applications for this 1267 Vacancies

ವಿದ್ಯಾರ್ಹತೆ, ವಯಸ್ಸು, ಮಾಸಿಕ ವೇತನ ನೇಮಕಾತಿಯ ಎಲ್ಲ ಮಾಹಿತಿ ಇಲ್ಲಿ ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಬ್ಯಾಂಕ್: ಬ್ಯಾಂಕ್ ಆಫ್ ಬರೋಡಾ

ಹುದ್ದೆಗಳ ಹೆಸರು: ಸ್ಪೆಷಲಿಸ್ಟ್ ಆಫೀಸರ್ (SO)

ಒಟ್ಟು ಹುದ್ದೆಗಳ ಸಂಖ್ಯೆ: 1267 ಹುದ್ದೆಗಳು

ಮಾಸಿಕ ವೇತನ: ನಿಯಮಾನುಸಾರ

ಪೋಸ್ಟಿಂಗ್: ಭಾರತ

ಅರ್ಜಿ ಸಲ್ಲಿಕೆ ಕೊನೆ ದಿನ: ಜನವರಿ 17

ಹುದ್ದೆಗಳ ವಿಭಾಗವಾರು ಪೂರ್ತಿ ಮಾಹಿತಿ

ಬರೋಡಾ ಬ್ಯಾಂಕ್ ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಗ್ರಾಮೀಣ ಮತ್ತು ಕೃಷಿ ಬ್ಯಾಂಕಿಂಗ್ ವಿಭಾಗದಲ್ಲಿ 200 ಹುದ್ದೆಗಳು, ಚಿಲ್ಲರೆ ಹೊಣೆಗಾರಿಕೆ 450 ಹುದ್ದೆ, MSME ಬ್ಯಾಂಕಿಂಗ್ 341, ಮಾಹಿತಿ ಭದ್ರತೆ 9 , ಅಧ್ಯಾಪಕರ ನಿರ್ವಹಣೆ: 22 ಹುದ್ದೆಗಳು ಹಾಗೂ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ 30, ಹಣಕಾಸು ವಿಭಾಗದಲ್ಲಿ 13 ಹುದ್ದೆಗಳು, ಐಟಿ 177 ಮತ್ತು ಎಂಟರ್‌ಪ್ರೈಸ್ ಡೇಟಾ ಮ್ಯಾನೇಜ್‌ಮೆಂಟ್ ಆಫೀಸರ್ ವಿಭಾಗದಲ್ಲಿ 25 ಹುದ್ದೆಗಳು ಖಾಲಿ ಇವೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.

Bank of Baroda Recruitment Invited Applications for this 1267 Vacancies

ಈ ಮೇಲಿನ ಎಲ್ಲ ಹುದ್ದೆಗಗಳಿಗೆ ವಯಸ್ಸು, ವಿದ್ಯಾರ್ಹತೆ ಬೇರೆ ಬೇರೆ ಆಗುತ್ತವೆ. ಅರ್ಹತೆ ಮಾನದಂಡಗಳು ಆಯಾ ಹುದ್ದೆಗಳ ತಕ್ಕಂತೆ ಇರಲಿವೆ. ಅರ್ಹ ವ್ಯಕ್ತಿಗಳು ಮಾತ್ರವೇ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕದ ಮಾಹಿತಿ

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ವರ್ಗ, EWS ಮತ್ತು OBC ಅಭ್ಯರ್ಥಿಗಳಿಗೆ ತೆರಿಗೆ ಬಿಟ್ಟು 600 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ 100 ರೂಪಾಯಿ ನಿಗದಿ ಇದೆ. ಯಾವ ಕಾರಣಕ್ಕೆ ಅರ್ಜಿ ಶುಲ್ಕ ಹಿಂತಿರುಗಿಸುವುದಿಲ್ಲ.

ಆಯ್ಕೆ ಹೇಗೆ?

ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. 225 ಅಂಕಗಳ 150 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಅದಕ್ಕಾಗಿ ಅವರಿಗೆ 150 ನಿಮಿಷಗಳ ಸಮಯ ನಿಗದಿ ಆಗಿರುತ್ತದೆ.

ಅರ್ಜಿ ಸಲ್ಲಿಕೆ ವಿವರ

ಬ್ಯಾಂಕ್ ಆಫ್ ಬರೋಡಾ ಅಧಿಸೂಚನೆ ಪ್ರಕಾರ, ಈ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2025 ಗಾಗಿ ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಬೇಕು.

* ಜಾಲತಾಣದಲ್ಲಿ Careers ಆಯ್ಕೆ ಮಾಡಿಕೊಳ್ಳಿ, ಬಳಿಕ Current Opportunities ಮೇಲೆ ಕ್ಲಿಕ್ ಮಾಡಿ.

* ನಂತರ ಪರದೆ ಮೇಲೆ ಕಾಣವು Recruitment ಆಯ್ಕೆ ಆಯ್ದುಕೊಳ್ಳಬೇಕು.

* Apply Now ಮೇಲೆ ಕ್ಲಿಕ್ ಮಾಡಿದ ಬಳಿಕ ಅಲ್ಲಿ ಕೇಳಲಾಗುವ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ವಿವರ ನಮೂದಿಸಿ.

* ಹೊಸದಾಗಿ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು.

* ನಿಗದಿತ ಅರ್ಜಿ ಸಮೂನೆಯಲ್ಲಿ ಅಗತ್ಯ ವಿವರ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

* ನಂತರ ನಿಮ್ಮ ಜಾತಿ ವರ್ಗದ ಆಧಾರದಲ್ಲಿ ಇರುವ ಶುಲ್ಕ ಪಾವತಿಸಬೇಕು.

* ಇದೆಲ್ಲ ಆದ ಬಳಿಕ ಅರ್ಜಿ ಸಬ್ಮಿಟ್ ಮಾಡಿ, ಭವಿಷ್ಯದ ಉಪಯೋಗಕ್ಕಾಗಿ ಡೌನ್‌ಲೋಡಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+