IBPS Recruitment: ಬ್ಯಾಂಕಿಂಗ್ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, 10,277 ಹುದ್ದೆ ನೇಮಕಾತಿ, ವಿವರ

Bank Job Alert: ಭಾರತೀಯ ಬ್ಯಾಂಕ್‌ಗಳಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಖುಷಿ ಸುದ್ದಿ ಸಿಕ್ಕಿದೆ. ಪ್ರಸ್ತಕ ಸಾಲಿನಲ್ಲಿ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಮಹತ್ವದ ಅಧಿಸೂಚನೆ ಹೊರಡಿಸಿದೆ. ಪದವಿ ಪಡೆದ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ.

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಗ್ರಾಹಕ ಸೇವಾ ಸಹವರ್ತಿಗಳು ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಸರ್ಕಾರಿ ಉದ್ಯೋಗವನ್ನು ಪಡೆಯುವ ಹಂಬಲವುಳ್ಳವರಿಗೆ ಇಲ್ಲೊಂದು ಅದ್ಭುತ ಅವಕಾಶ ಇದೆ. ಮಾಸಿಕ ಸಂವಳ, ವಯಸ್ಸು, ಅರ್ಜಿ ಸಲ್ಲಿಕೆ, ಕೊನೆ ದಿನಾಂಕ ವಿವರ ತಿಳಿಯಿರಿ.

IBPS Recruitment 2025 10 277 Clerk Vacancies Announced Apply by August 28 Know more

ನೇಮಕಾತಿ ಪೂರ್ಣ ಮಾಹಿತಿ

* ನೇಮಕಾತಿ ಸಂಸ್ಥೆ: IBPS

* ಹುದ್ದೆ ಹೆಸರು: ಗ್ರಾಹಕ ಸೇವಾ ಸಹವರ್ತಿಗಳು

* ಒಟ್ಟು ಹುದ್ದೆ: 10,277

* ಪೋಸ್ಟಿಂಗ್: ಭಾರತದಲ್ಲಿ ಎಲ್ಲಿ ಯಾದರೂ

* ಅರ್ಜಿ ಸಲ್ಲಿಕೆ ವಿಧಾನ್: ಆನೈಲೈನ್

* ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: ಆಗಸ್ಟ್ 28

ಶೈಕ್ಷಣಿಕ ಅರ್ಹತೆ ವಿವರ

IBPS ಗ್ರಾಹಕ ಸೇವಾ ಸಹವರ್ತಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯುವ ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮಂಡಳಿ ಇಲ್ಲವೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಅಂತವರು ಅರ್ಜಿ ಸಲ್ಲಿಸಲು ಅರ್ಹರು

ಗರಿಷ್ಠ ವಯಸ್ಸು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 2025 ಆಗಸ್ಟ್ 1ಕ್ಕೆ ಕನಿಷ್ಠ 20 ವರ್ಷಗಳು ಆಗಿರಬೇಕು. ಗರಿಷ್ಠ 28 ವರ್ಷ ಎಂದು ವಯೋಮಿತಿ ನಿಗದಿಪಡಿಸಲಾಗಿದೆ. ಇನ್ನೂ ವಯೋಮಿತಿ ಸಡಿಲಿಕೆ ನೋಡುವುದಾದರೆ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ 03 ವರ್ಷ, SC/ST ಅಭ್ಯರ್ಥಿಗಳಿಗೆ ಐದು ವರ್ಷ 05 ವರ್ಷ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಸಿಗಲಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

IBPS Recruitment 2025 10 277 Clerk Vacancies Announced Apply by August 28 Know more

ಅರ್ಜಿ ಶುಲ್ಕದ ವಿವರ

ಎಸ್‌ಸಿ/ಎಸ್‌ಟಿ, ಪಿಡಬ್ಲುಡಿ, ಎಎಸ್‌ಎಂ, ಡಿಇಎಸ್‌ಎಂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ರೂಪಾಯಿ ನಿಗದಿ ಮಡಲಾಗಿದೆ. ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 850 ರೂಪಾಯಿ ನಿಗದಿ ಮಾಡಲಾಗಿದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಸಹ ಆಗಸ್ಟ್ 28 ಕೊನೆಯ ದಿನಾಂಕವಾಗಿದೆ.

ಆಯ್ಕೆ ವಿಧಾನ, ಮಾಸಿಕ ವೇತನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಮುಖ್ಯ ಪರೀಕ್ಷೆ ಜೊತೆಗೆ ದಾಖಲೆ ಪರಿಶೀಲನೆ, ನಂತರ ವೈದ್ಯಕೀಯ ಪರೀಕ್ಷೆ ಇರುತ್ತುದೆ. ನಂತರ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆದವರಿಗೆ ಭಾರತದಲ್ಲಿ ಯಾವ ರಾಜ್ಯದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕವಾಗಿ 24,050 ರೂಪಾಯಿಯಿಂದ 64,480 ರೂ.ವೇತನ ನೀಡಲಾಗುತ್ತದೆ.

ಅಭ್ಯರ್ಥಿಗಳು ಕೂಡಲೇ ಅಧಿಕೃತ ವೆಬ್‌ಸೈಟ್ https://ibps.in ಮೂಲಕ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯಾದ ನಂತರ ಭವಿಷ್ಯದ ಪ್ರಯೋಜನಕ್ಕಾಗಿ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+