• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ನಿಷೇಧಾಜ್ಞೆ; ಆಗಸ್ಟ್ 25ರ ಉದ್ಯೋಗ ಮೇಳ ಮುಂದೂಡಿಕೆ

|
Google Oneindia Kannada News

ಮಡಿಕೇರಿ, ಆಗಸ್ಟ್ 24; ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಗಸ್ಟ್ 25ರಂದು ಆಯೋಜನೆ ಮಾಡಲಾಗಿದ್ದ ಉದ್ಯೋಗ ಮೇಳವನ್ನು ಮುಂದೂಡಲಾಗಿದೆ. ಆಗಸ್ಟ್ 29 ರಂದು ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ಜಿಲ್ಲಾ ಉದ್ಯೋಗ ಮಿನಿಯಮ ಕಚೇರಿ ಆಗಸ್ಟ್ 25ರ ಗುರುವಾರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿತ್ತು. ಆದರೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಉದ್ಯೋಗ ಮೇಳ ಮುಂದೂಡಲಾಗಿದೆ.

ಐಐಐಟಿ ಬೆಂಗಳೂರು ನೇಮಕಾತಿ 2022: ಸಿಸ್ಟಮ್ ಇಂಜಿನಿಯರ್ ಹುದ್ದೆಗಳಿವೆಐಐಐಟಿ ಬೆಂಗಳೂರು ನೇಮಕಾತಿ 2022: ಸಿಸ್ಟಮ್ ಇಂಜಿನಿಯರ್ ಹುದ್ದೆಗಳಿವೆ

ಉದ್ಯೋಗ ಮೇಳವು ಆಗಸ್ಟ್ 29ರ ಸೋಮವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿಯೇ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ಹುದ್ದೆಗಳ ನೇಮಕಾತಿಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ

ಉದ್ಯೋಗ ಮೇಳದಲ್ಲಿ ಕ್ಲಬ್ ಮಹೀಂದ್ರ ರೆಸಾರ್ಟ್, ಮಡಿಕೇರಿ. ಪ್ಯಾಲೇಸ್ ಟೊಯೋಟಾ ಮೈಸೂರು. ಕೂರ್ಗ್ ಗವದನ್ ರೆಸಾರ್ಟ್ ಮೇಕೇರಿ. ಎಸ್‍ಎಲ್‍ಎನ್ ಕಾಫಿ ಪ್ರೈ. ಲಿ., ಕೂಡಿಗೆ. ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವೀಸಸ್ ಮೈಸೂರು. ಸಚಿನೆಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈ ಲಿ. ಮೈಸೂರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಹಾಜರಾಗುವಂತೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-225851ಗೆ ಕರೆ ಮಾಡಬಹುದಾಗಿದೆ.

ಗ್ರಾಮ ಪಂಚಾಯಿತಿ ನೇರ ನೇಮಕಾತಿಗೆ ಸರ್ಕಾರದ ತಾತ್ಕಾಲಿಕ ತಡೆಗ್ರಾಮ ಪಂಚಾಯಿತಿ ನೇರ ನೇಮಕಾತಿಗೆ ಸರ್ಕಾರದ ತಾತ್ಕಾಲಿಕ ತಡೆ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ; ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 9 ಅಂಗನವಾಡಿ ಕಾರ್ಯಕರ್ತೆ ಹಾಗೂ 25 ಅಂಗನವಾಡಿ ಸಹಾಯಕಿಯರ ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಬೀರುಗ 1, ಹೊಸನಲ್ಲಿಕೋಟೆ, ಪೊದಕೇರಿ ಮಿನಿ, ಸಿಂಕೋನ ಮಿನಿ, ಕೂಟಿಯಾಲ, ಕಾಟಿಗುಂಡಿ ಪೈಸಾರಿ, ಹೊಲಮಾಳ, ಕನ್ನಡಮಠ, ಹಳ್ಳಿಗಟ್ಟು ಮಿನಿಯಲ್ಲಿ ಖಾಲಿ ಇವೆ.

August 25 Job Fair In Kodagu Postponed

ಅಂಗನವಾಡಿ ಸಹಾಯಕಿಯರ ಹುದ್ದೆಗಳು ಕುಂದ, ಕಾಟಿಗುಂಡಿ ಪೈಸಾರಿ, ಬಿ. ಶೆಟ್ಟಿಗೇರಿ, ದೇವನೂರು 2, ತೆರಾಲು 2, ಗದ್ದೆಮನೆ, ಹೊಸನಲ್ಲಿಕೋಟೆ, ಆಂಗೋಡು, ಬೇಗೂರು 2, ಹೈಸೋಡ್ಲೂರು, ಪೊನ್ನಪೇಟೆ 3, ಬೀರುಗ 1, ಕುಂದೂರು, ದುಬಾರೆ ಕಲ್ಲುಕೋರೆ, ಕ್ರಿಶ್ಚಿಯನ್ ಕಾಲೋನಿ, ರುದ್ರಗುಪ್ಪೆ, ಪುಲಿಯೇರಿ, ಅಂಬುಕೋಟೆ, ಬೆಸಗೂರು 2, ಕಲ್ತೋಡು, ನಾಂಗಾಲ, ಬೈರಂಬಾಡ, ಬಾಡಗಬಾಣಂಗಾಲ, ಕಣ್ಣಂಗಾಲ, ಅಯ್ಯಪ್ಪಬೆಟ್ಟದಲ್ಲಿ ಖಾಲಿ ಇದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಕೆ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆಯಾಗಿರಬೇಕು ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿ ವಿದ್ಯಾರ್ಹತೆ ನಿಗದಿ ಮಾಡಿರಬೇಕು.

ಅಭ್ಯರ್ಥಿಗಳಿಗೆ 18 ರಿಂದ 35 ವಯೋಮಿತಿ ನಿಗದಿ ಮಾಡಲಾಗಿದೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿಗಳನ್ನು ಸಲ್ಲಿಸಲು ವಿಳಾಸ ವೆಬ್‍ಸೈಟ್ www.anganwadirecruit.kar.nic.in. ಆನ್‍ಲೈನ್‍ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರೆ ಯಾವುದೇ ರೂಪದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ.

ಆಸಕ್ತರು ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 08274-201878.

ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಆಹ್ವಾನ; ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು ಇವರು ವಿವಿಧ ವೃತ್ತಿಗಳಲ್ಲಿ ಐಟಿಐ ಪಾಸಾದ ಅರ್ಹ ಅಭ್ಯರ್ಥಿಗಳಿಗೆ ಅಪ್ರೆಂಟಿಷಿಪ್ ತರಬೇತಿ ನೀಡುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ತರಬೇತಿಯ ಅರ್ಜಿಗಳನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇಂದ ಪಡೆದುಕೊಂಡು ಭರ್ತಿ ಮಾಡಿ ಸಲ್ಲಿಸಬೇಕು. ಆಸಕ್ತರು ಅರ್ಜಿ ನಮೂನೆಯನ್ನು www.hal-india.com ರಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 5ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇಲ್ಲಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recommended Video

   ರಾಹುಲ್ ಪ್ರಿಯಾಂಕಾ ಜೊತೆ ಸೋನಿಯಾ ಇಟಲಿಗೆ..? | Oneindia Kannada
   English summary
   Kodagu district employment exchange office said that job fair on August 25th postponed. Job fair will be held on August 29th from 10 am to 2 pm.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X