KPSC; ಕೆಪಿಎಸ್‌ಸಿಯಲ್ಲಿಯೇ ನೂರಾರು ಹುದ್ದೆಗಳು ಖಾಲಿ!

ಬೆಂಗಳೂರು, ಡಿಸೆಂಬರ್ 20; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಪ್ರಸ್ತಾವನೆಯನ್ನು ಸ್ವೀಕಾರ ಮಾಡಿ, ನೇಮಕಾತಿ ಮಾಡುವುದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ). ಆದರೆ ಕೆಪಿಎಸ್‌ಸಿಯಲ್ಲಿಯೇ ನೂರಾರು ಹುದ್ದೆಗಳು ಖಾಲಿ ಉಳಿದಿವೆ.

ವಿವಿಧ ಇಲಾಖೆಗಳಂತೆ ಕೆಪಿಎಸ್‌ಸಿ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಶೇ 60ರಷ್ಟು ಹುದ್ದೆಗಳು ಖಾಲಿ ಇದ್ದು ಇರುವ ಸಿಬ್ಬಂದಿಗಳ ಮೇಲೆ ಕಾರ್ಯಾಭಾರ ಹೆಚ್ಚಿದೆ. ಸುಮಾರು ವರ್ಷಗಳಿಂದಲೂ ಸಿಬ್ಭಂದಿ ಕೊರತೆ ಇದೆ. ಆದರೆ ನೇಮಕಾತಿ ಮಾತ್ರ ಆಗಿಲ್ಲ.

Around 250 Post Vacant In Karnataka Public Service Commission

ಕೆಪಿಎಸ್‌ಸಿಗೆ ಒಟ್ಟು ಮಂಜೂರಾಗಿರುವ ಹುದ್ದೆಗಳು 371. ಆದರೆ 121 ಸಿಬ್ಭಂದಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಮತ್ತು ಗಣಕಯಂತ್ರ ವಿಭಾಗದಲ್ಲಿ ಹೆಚ್ಚು ಸಿಬ್ಬಂದಿಗಳ ಅವಶ್ಯಕತೆ ಇದೆ. ಕಾರ್ಯಭಾರವನ್ನು ತಪ್ಪಿಸಲು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡು ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ.

ಹುದ್ದೆಗಳನ್ನು ತುಂಬಿಲ್ಲ; ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ 250 ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದಾಗಿ ಕಾಲಮಿತಿಯೊಳಗೆ ಕೆಲಸಗಳು ಆಗಲು ತೊಂದರೆ ಉಂಟಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ವಿವಿಧ ಇಲಾಖೆಗಳಿಗೆ ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಪಿಎಸ್‌ಸಿಯೇ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ.

ಇಲಾಖೆಗಳ ನೇಮಕಾತಿ ಪ್ರಸ್ತಾವನೆ ಪಡೆಯುವುದು, ಅಧಿಸೂಚನೆ ಹೊರಡಿಸುವುದು, ಸ್ಮರ್ಧಾತ್ಮಕ ಪರೀಕ್ಷೆ ನಡೆಸುವುದು. ಮೆರಿಟ್ ಲಿಸ್ಟ್ ತಯಾರಿ ಹೀಗೆ ವಿವಿಧ ಕಾರ್ಯದ ಒತ್ತಡಗಳು ಕೆಪಿಎಸ್‌ಸಿಯಲ್ಲಿ ಇರುತ್ತದೆ. ಆದರೆ ಕಳೆದ 3-4 ವರ್ಷಗಳಿಂದ ಆಯೋಗದ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ವಿವಿಧ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿದರೂ ಸರಿಯಾದ ಸಮಯಕ್ಕೆ ಮೆರಿಟ್ ಲಿಸ್ಟ್ ಪ್ರಕಟವಾಗುವುದಿಲ್ಲ. ಅದಕ್ಕೆ ಕಾರಣ ಕೆಪಿಎಸ್‌ಸಿಯಲ್ಲಿಯೇ ಹುದ್ದೆಗಳು ಖಾಲಿ ಇರುವುದು. ವಿವಿಧ ಇಲಾಖೆಗಳಿಂದ ನೇಮಕಾತಿ ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡುವ ಸರ್ಕಾರ ಕೆಪಿಎಸ್‌ಸಿಯ ಹುದ್ದೆಗಳನ್ನು ಭರ್ತಿ ಮಾಡುವತ್ತ ಏಕೆ ಗಮನಹರಿಸುವುದಿಲ್ಲ? ಎಂಬದು ಪ್ರಶ್ನೆಯಾಗಿದೆ.

ತಾಂತ್ರಿಕ, ಐಟಿ ಸೆಲ್, ಲೆಕ್ಕಶಾಖೆ, ಆಡಳಿತ ವಿಭಾಗ, ಪ್ರಥಮ ದರ್ಜೆ ಸಹಾಯಕ, ಪರೀಕ್ಷಾ ವಿಭಾಗ, ಗಣಕಯಂತ್ರ ವಿಭಾಗ, ಗೌಪ್ಯ ವಿಭಾಗ, ಟೈಪಿಸ್ಟ್ ಸೇರಿದಂತೆ ವಿವಿಧ ವೃಂದದ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಸಿಗುತ್ತದೆ.

ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಎಸ್. ಲತಾ ಕುಮಾರಿ ಈ ಕುರಿತು ಮಾತನಾಡಿದ್ದು, "ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ನಿಜ. ಈ ಬಗ್ಗೆ ಸರ್ಕಾರದ ಗಮನಕ್ಕೂ ಸಹ ತರಲಾಗಿದೆ. ಕೆಲಸದ ಹೊರೆಯ ಕಾರಣ ಹೊರ ಗುತ್ತಿಗೆ ಮೇಲೆ 80 ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

ಕೆಪಿಎಸ್‌ಸಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡುವಲ್ಲಿ ಆಸಕ್ತಿ ತೋರುವ ಸರ್ಕಾರ ಕೆಪಿಎಸ್‌ಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಏಕೆ ಆಸಕ್ತಿ ತೋರಿಸುವುದಿಲ್ಲ. ಸರ್ಕಾರ ಆಯೋಗದ ಖಾಲಿ ಹುದ್ದೆಗಳ ಭರ್ತಿಗೆ ಇನ್ನಾದರೂ ಕ್ರಮ ಕೈಗೊಳ್ಳಲಿದೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+