ವಿಜಯಪುರದಲ್ಲಿ ಕೆಲಸ ಖಾಲಿ ಇದೆ; ಏ.12ರ ತನಕ ಅರ್ಜಿ ಹಾಕಿ

ವಿಜಯಪುರ, ಮಾರ್ಚ್ 17; ವಿಜಯಪುರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರ ಮೇಲುಸ್ತುವಾರಿಯಲ್ಲಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ಒಪ್ಪಂದದ ಕರಾರಿಗೊಳಪಟ್ಟು ಕೆಲಸ ನಿರ್ವಹಣೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಸಲ್ಲಿಕೆ ಮಾಡಲು 12/4/2021 ಕೊನೆಯ ದಿನವಾಗಿದೆ.

ಯೋಜನಾ ನಿರ್ದೇಶಕರು (1) ಹುದ್ದೆಗೆ ವಯೋಮಿತಿ 40 ವರ್ಷಗಳು. ವೇತ 19,965 ರೂ.ಗಳು. ಅಭ್ಯರ್ಥಿಗಳು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ MSW/ ಅಭಿವೃದ್ಧಿ ಅಧ್ಯಯನ/ ಲಾಭರಹಿತ ಸಂಸ್ಥೆಗಳ ನಿರ್ವಹಣಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.

Apply For Various Post In Vijayapura April 12th Last Date

ಗುಮಾಸ್ತ ಕಂ ಲೆಕ್ಕಿಗ (1) 40 ವರ್ಷದೊಳಗಿರಬೇಕು. ವೇತನ 13,310 ರೂ.ಗಳು. ಅಭ್ಯರ್ಥಿಗಳು ಬಿಕಾಂ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.

ಕಛೇರಿ ಜವಾನರು (1) ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ವಯೋಮಿತಿ 40 ವರ್ಷದೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 10,648 ರೂ. ವೇತನ ನಿಗದಿ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ಖುದ್ದಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ವಿಳಾಸ; ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಛೇರಿ, ಕಾರ್ಮಿಕ ಇಲಾಖೆ ಅಲ್ಲಾಪುರ ಓಣಿ, ಸಿಂದಗಿ ನಾಕಾ, ವಿಜಯಪುರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+