ಹಾಸನ: ಆಯುಷ್ ಆಸ್ಪತ್ರೆಯಲ್ಲಿ ಕೆಲಸ ಖಾಲಿ ಇದೆ ಅರ್ಜಿ ಹಾಕಿ

ಹಾಸನ, ಸೆಪ್ಟೆಂಬರ್ 19 : ಹಾಸನ ಜಿಲ್ಲೆಯ ಆಯುಷ್ ಆಸ್ಪತ್ರೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 9/10/2018ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ತಜ್ಞ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು 31/3/2019ರ ತನಕ ಕಾರ್ಯ ನಿರ್ವಹಿಸಬೇಕಾಗಿದೆ.

ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹಾಸನ ಅವರಿಂದ ಅರ್ಜಿಗಳನ್ನು ಪಡೆದುಕೊಂಡು 10/9/2018 ರಿಂದ 9/10/2018ರ ಸಂಜೆ 4.30ರೊಳಗೆ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.

Apply for various post in Ayush hospital Hassan

ಹುದ್ದೆಗಳ ವಿವರ : ತಜ್ಞ ವೈದ್ಯರು ಆಯುರ್ವೇದ, ಸಂಚಿತ ವೇತನ 33000 ರೂ.ಗಳು. ಹಾಸನ 1, ಹೊಳೆನರಸೀಪುರ 1, ಚನ್ನರಾಯಪಟ್ಟಣ 1, ಅರಕಲಗೂಡು 1. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ತಜ್ಞ ವೈದ್ಯರು ಯುನಾನಿ. ಸಂಚಿತ ವೇತನ 33000. ಚನ್ನರಾಯಪಟ್ಟಣ 1, ಅರಕಲಗೂಡು 1 ಹುದ್ದೆ. ಯುನಾನಿ ವೈದ್ಯ ಪದ್ಧತಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಔಷಧ ವಿತರಕರು. ಸಂಚಿತ ವೇತನ 14,350 ರೂ.. ಹಾಸನ 2, ಹೊಳೆನರಸೀಪುರ 2, ಚನ್ನರಾಯಪಟ್ಟಣ 2, ಅರಕಲಗೂಡು 2 ಹುದ್ದೆಗಳು. ಎಸ್‌ಎಸ್‌ಎಲ್‌ಸಿ ಪೂರ್ಣಗೊಂಡಿರಬೇಕು. ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ ತರಬೇತಿ ಪಡೆದಿರಬೇಕು.

ಮಸಾಜಿಸ್ಟ್. ಸಂಚಿತ ವೇತನ 10300 ರೂ.ಗಳು. ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು ತಲಾ 1ಹುದ್ದೆ. ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ, ಆಯುಷ್ ಆಸ್ಪತ್ರೆ, ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಆಗಿ ಕರ್ತವ್ಯ ನಿರ್ವಹಣೆ ಮಾಡಿದ ಅನುಭವ ಇರಬೇಕು.

ಕ್ಷಾರಸೂತ್ರ ಅಟೆಂಡೆಂಟ್. ಸಂಚಿತ ವೇತನ 10300. ಹೊಳೆನರಸೀಪುರ, ಅರಕಲಗೂಡು 1 ಹುದ್ದೆ. ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.

ಸ್ತ್ರೀ ರೋಗ ಅಟೆಂಡೆಂಟ್. 10300 ಸಂಚಿತ ವೇತನ. ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು 1 ಹುದ್ದೆಗಳು. 10ನೇ ತರಗತಿ ವಿದ್ಯಾರ್ಹತೆ ಮತ್ತು ಆಯುಷ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.

ವಯೋಮಿತ ವಿವರ : 10/10/2018ರಂದು ಎಲ್ಲಾ ವರ್ಗದವರು ಕನಿಷ್ಠ 18 ವರ್ಷ ಪೂರ್ಣಗೊಳಿಸಿರಬೇಕು. ಎಸ್‌ಸಿ/ಎಸ್‌ಟಿ ವರ್ಗದವರಿಗೆ ಗರಿಷ್ಠ 40, ಪ್ರವರ್ಗ-1, 2ಎ, 2ಬಿ, 3ಎ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ವರ್ಗದವರಿಗೆ 35 ವರ್ಷ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+