ವಿಜಯಪುರ ಸಹಕಾರ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ
ವಿಜಯಪುರ, ಫೆಬ್ರವರಿ 28; ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ವಿಜಯಪುರ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 5/3/2022ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ.
ಮಾನ್ಯ ನಿಬಂಧಕರು, ಸಹಕಾರ ಸಂಘಗಳು, ಬೆಂಗಳೂರು ಇವರ ಆದೇಶದ ಅನ್ವಯ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ವಿಜಯಪುರ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ.
ಹಿರಿಯ ವ್ಯವಸ್ಥಾಪಕರು 3, ಕಿರಿಯ ವ್ಯವಸ್ಥಾಪಕರು 5, ಕಂಪ್ಯೂಟರ್ ಇಂಜಿನಿಯರ್ 1, ಕ್ಷೇತ್ರಾಧಿಕಾರಿಗಳು 14, ಕೃಷಿ ಅಭಿವೃದ್ಧಿ ಅಧಿಕಾರಿ 1, ಪ್ರಥಮ ದರ್ಜೆ ಸಹಾಯಕರು 20, ಜವಾನ 21, ಸೆಕ್ಯುರಿಟಿ ಗಾರ್ಡ್ 2 ಸೇರಿ 67 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅಭ್ಯರ್ಥಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ಪೂರೈಸಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 35, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.
ಮಾಜಿ ಸೈನಿಕ ಅಭ್ಯರ್ಥಿಯ ಭಾರತದ ಸಶಸ್ತ್ರ ಪಡೆಯಲ್ಲಿ ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ಅವರು ಸಲ್ಲಿಸಿದ ಸೇವೆಯ ಜೊತೆಗೆ 3 ವರ್ಷಗಳ ವಯೋಮಿತಿಯ ರಿಯಾಯಿತಿಗೆ ಅರ್ಹರಾಗಿರುತ್ತಾರೆ. ಆದರೆ ವಯಸ್ಸು 45 ವರ್ಷ ಮೀರಬಾರದು.
ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ಹಾಗೂ ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 500 ರೂ., ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕರಿಗೆ 250 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನಿಂದ ಪೂರೈಕೆ ಮಾಡುವ ಮೂಲ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಆಯಾ ಹುದ್ದೆಗೆ ಸಂಬಂಧಪಟ್ಟ ಅರ್ಜಿಯನ್ನು ಬ್ಯಾಂಕ್‌ನಲ್ಲಿ ಪಡೆದುಕೊಂಡು ಅದರ ಮೂಲಕವೇ ಸಲ್ಲಿಸಬೇಕು.
ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ 5/3/2022 ಕೊನೆಯ ದಿನವಾಗಿದೆ. ಸೋಲಾಪುರ ರಸ್ತೆಯಲ್ಲಿರುವ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ ಸಂಚಾಲಕ ಸದಸ್ಯರು, ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ವಿಜಯಪುರ.
ಜವಾನ/ ಸೆಕ್ಯುರಿಟಿ ಗಾರ್ಡ್ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1:20ರ ಅನುಪಾತದಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ 85ಕ್ಕೆ ಇಳಿಸಿ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಸ್ವಯಂ ದೃಢೀಕರಿಸಿದ ಸ್ವ-ಹಸ್ತಾಕ್ಷರವಿರುವ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಂಡಿಸಬೇಕು. ವಯಸ್ಸು ದೃಢೀಕರಣಕ್ಕಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ ವರ್ಗಾವಣೆ ಪತ್ರ ಲಗತ್ತಿಸಬೇಕು. ವಿದ್ಯಾರ್ಹತೆ ಕುರಿತು ಪ್ರಮಾಣ ಪತ್ರ ಪದವಿಯ ಎಲ್ಲಾ ವರ್ಗಗಳ ಅಂಕಪಟ್ಟಿ ಲಗತ್ತಿಸಬೇಕು.
ಪೂರ್ಣ ವಿವರಗಳು ಇಲ್ಲದ, ಸ್ಪಷ್ಟವಾಗಿ ಬರೆಯದ, ಸಹಿ ಮಾಡದ, ಅಗತ್ಯ ದಾಖಲೆಗಳನ್ನು ಲಗತ್ತಿಸದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.
ಅಭ್ಯರ್ಥಿಗಳ ಆಯ್ಕೆ ಅರ್ಜಿ ಸ್ವೀಕಾರ ಮಾಡುವ ಮತ್ತು ನಿರಾಕರಿಸುವ ಹಕ್ಕನ್ನು ನೇಮಕಾತಿ ಸಮಿತಿ ಕಾಯ್ದಿರಿಸಿಕೊಂಡಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷದ ಅವಧಿಯ ಪರೀಕ್ಷಾರ್ಹ ಸೇವೆಯಲ್ಲಿ ಇರಬೇಕು ಮತ್ತು ಆಯ್ಕೆಗೊಂಡ ಅಭ್ಯರ್ಥಿಗಳು ಬ್ಯಾಂಕಿನಿಂದ ಸೂಚಿಲ್ಪಟ್ಟಂತೆ ಭದ್ರತೆ ನೀಡಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ vijaypurdccbank.com












Click it and Unblock the Notifications