ಬೆಂಗಳೂರಿನ ಕೆಓಎಫ್ ಕಚೇರಿಯಲ್ಲಿ ವಿವಿಧ ಹುದ್ದೆ ಖಾಲಿ ಇವೆ
ಬೆಂಗಳೂರು, ಮಾರ್ಚ್ 18; ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ಕೇಂದ್ರ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಸಲ್ಲಿಸಲು 8/4/2021 ಸಂಜೆ 5.30 ಕೊನೆಯ ದಿನವಾಗಿದೆ.
ಜನರಲ್ ಮ್ಯಾನೇಜರ್ 1, ಅಸಿಸ್ಟೆಂಟ್ ಮ್ಯಾನೇಜರ್ 2, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ 1, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ (ಗುಣನಿಯಂತ್ರಣ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಜನರಲ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 40, ಗರಿಷ್ಠ 52 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಅಸ್ಟಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಹುದ್ದೆಗೆ ಕನಿಷ್ಠ 18, ಗರಿಷ್ಠ 40 ವರ್ಷಗಳು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ -1 ಇವರಿಗೆ 40, ಹಿಂದುಳಿದ ಜಾತಿ/ ಸಮುದಾಯಕ್ಕೆ 38 ವರ್ಷಗಳು, ಸಾಮಾನ್ಯ ವರ್ಗದವರಿಗೆ 35 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿಪಡಿಸಿದ ವಿದ್ಯಾರ್ಹತೆ, ಕೆಲಸದ ಅನುಭವ, ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಸಿದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳು 500 ರೂ., ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ, ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಮುಕ್ತ ವಿಶ್ವವಿದ್ಯಾಲಯದಿಂದ ಪಡೆದ ಪದವಿಯನ್ನು ಪರಿಗಣಿಸುವುದಿಲ್ಲ. ವೆಬ್‌ಸೈಟ್‌ನಿಂದ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು.
ಅಗತ್ಯ ದಾಖಲೆಗಳ ಜೊತೆ ಅರ್ಜಿಗಳನ್ನು ಸಲ್ಲಿಸಲು ವಿಳಾಸ ವ್ಯವಸ್ಥಾಪಕ ನಿರ್ದೇಶಕರು, ಕೆ.ಸಿ.ಓ.ಜಿ.ಎಫ್. ಲಿ., ನಂ 11, 4ನೇ ಮಹಡಿ, ಬ್ಲ್ಯೂ ಕ್ರಾಸ್ ಛೇಂಬರ್ಸ್, ಇನ್‌ಫೆಂಟ್ರಿ ಅಡ್ಡ ರಸ್ತೆ, ಬೆಂಗಳೂರು 01.
Recommended Video
ಹೆಚ್ಚಿನ ಮಾಹಿತಿ, ಅರ್ಜಿಗಾಗಿ ವೆಬ್ ಸೈಟ್ ವಿಳಾಸ












Click it and Unblock the Notifications