ಕೆಕೆಆರ್‌ಡಿಬಿ ಮಂಡಳಿಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಹಾಕಿ

ಕಲಬುರಗಿ, ಜೂನ್ 25; ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು 3/7/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಓರ್ವ ಕಾರ್ಯನಿರ್ವಾಹಕ ಅಭಿಯಂತರರು, 5 ಜನ ಸಹಾಯಕ ಅಭಿಯಂತರರು, 2 ಜನ ಜೂನಿಯರ್ ಪ್ರೋಗ್ರಾಮರ್, 2 ಜನ ಕಂಪ್ಯೂಟರ್ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹೊರಗುತ್ತಿಗೆ ಹಾಗೂ ಗೌರವಧನ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಅರ್ಹ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಂಡಳಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Apply For Various Post At Kalyana Karnataka Regional development Board

ನಿವೃತ್ತಿ ಅಧಿಕಾರಿ/ ಸಿಬ್ಬಂದಿ ವಯಸ್ಸು 65 ವರ್ಷ ಮೀರಿರಬಾರದು. ತಮ್ಮ ಪಿಂಚಣಿ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಗರಿಷ್ಠ ಒಂದು ವರ್ಷದ ತನಕ ಮಾತ್ರ ಸೇವೆ ಪಡೆದುಕೊಳ್ಳಲಾಗುತ್ತದೆ.

ನಿವೃತ್ತ ಅಧಿಕಾರಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ನಿವೃತ್ತ ಅಧಿಕಾರಿ/ ಸಿಬ್ಬಂದಿ ಅವರು ನೀಡುವ ಸೇವೆಯ ಆಧಾರದ ಮೇಲೆ ಸೇವೆಯನ್ನು ಮುಂದುವರೆಸುವ ಹಾಗೂ ಸದರಿಯವರ ಕಾರ್ಯಕ್ಷಮತೆಯಲ್ಲಿ ಸೂಕ್ತತೆ ಇಲ್ಲದಿದ್ದರೆ ಅವರ ಸೇವೆಯನ್ನು ರದ್ದುಪಡಿಸುವ ಅಧಿಕಾರ ಪ್ರಾಧಿಕಾರಿಗಳಿಗೆ ಇರುತ್ತದೆ.

ಹುದ್ದೆಗಳ ಭರ್ತಿಯ ಅರ್ಹತಾ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಯನ್ನು ಮಂಡಳಿಯ www.hkrdb.kar.nic.in ವೆಬ್‍ಸೈಟ್‍ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+