ಡಿಎಸ್‌ಎಸ್‌ಪಿ ನೇಮಕಾತಿ 2020; ಬೆಂಗಳೂರಲ್ಲಿ ಕೆಲಸ
ಬೆಂಗಳೂರು, ಸೆಪ್ಟೆಂಬರ್ 03: ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಕರ್ನಾಟಕ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 21 ಸೆಪ್ಟೆಂಬರ್ 2020ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
Recommended Video
ರಾಜ್ಯದಲ್ಲಿ ಜಾರಿಯಲ್ಲಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಂದಾಯ ಇಲಾಖೆಯಲ್ಲಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಡಿ ಅನುಷ್ಠಾನಗೊಳಿಸಲಾಗುತ್ತಿದೆ.
ಕನ್ಸಲ್‌ಟೆಂಟ್ 1, ಸೀನಿಯರ್ ಪ್ರೋಗ್ರಾಮರ್ 1, ಜ್ಯೂನಿಯರ್ ಪ್ರೋಗ್ರಾಮರ್ 1 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.

ಕನ್ಸಲ್‌ಟೆಂಟ್ ಹುದ್ದೆಗೆ ಬಿ. ಇ/ ಬಿ. ಟೆಕ್/ ಎಂ. ಟೆಕ್ ವಿದ್ಯಾರ್ಹತೆ ನಿಗದಿ ಮಾಡಲಾಗಿದ್ದು ವೇತನ 90,000 ರೂ. ನಿಗದಿ ಮಾಡಲಾಗಿದೆ. ಸೀನಿಯರ್ ಪ್ರೋಗ್ರಾಮರ್, ಜ್ಯುನಿಯರ್ ಪ್ರೋಗ್ರಾಮರ್ ಹುದ್ದೆಗೆ ಬಿ. ಇ/ ಟಿ. ಟೆಕ್ ವಿದ್ಯಾರ್ಹತೆ ಇದೆ. ಸೀನಿಯರ್ ಪ್ರೋಗ್ರಾಮರ್‌ಗೆ 70 ಸಾವಿರ, ಜ್ಯೂನಿಯರ್ ಪ್ರೋಗ್ರಾಮರ್‌ಗೆ 50 ಸಾವಿರ ವೇತನ ನಿಗದಿ ಮಾಡಲಾಗಿದೆ.
ಡಿಎಸ್‌ಎಸ್‌ಪಿ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ.
ಅರ್ಜಿಗಳನ್ನು ನಿಗದಿತ ರೀತಿಯಲ್ಲಿ ಭರ್ತಿ ಮಾಡಿ ರಿಜಿಸ್ಟರ್ ಅಥವ ಸ್ಪೀಡ್ ಪೋಸ್ಟ್ ಮೂಲಕ ಸೆಪ್ಟೆಂಬರ್ 21ರೊಳಗೆ ಕಳಿಹಿಸಬೇಕು. ವಿಳಾಸ : ಉಪನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಕಂದಾಯ ಇಲಾಖೆ, ಬೆಂಗಳೂರು 560009.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್












Click it and Unblock the Notifications