ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಆಸಕ್ತರಿಂದ ಅರ್ಜಿ ಆಹ್ವಾನ

ಹೈದರಾಬಾದ್, ಮೇ 25; ಎನ್‌ಎಸಿಎಸ್ ಹೈದರಾಬಾದ್ ಆನ್‌ಲೈನ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗಾಗಿ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ. ಭಾರತದ ಯಾವುದೇ ರಾಜ್ಯದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

10+2, ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೈಬರ್ ಸೆಕ್ಯೂರಿಟಿ ಅಫೀಸರ್, ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್, ಸೈಬರ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ, ಸೈಬರ್ ಸೆಕ್ಯೂರಿಟಿ ಪ್ರಮಾಣ ಪತ್ರ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Apply For Various Course In National Academy Of Cyber Security Hyderabad

ಎನ್‌ಎಸಿಎಸ್ ಎಸ್‌ಸಿ, ಎಸ್‌ಟಿ, ಬಿಸಿ, ಓಬಿಸಿ, ಇಬಿಸಿ, ಹಿಂದುಳಿದ ವರ್ಗ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳು, ನಿವೃತ್ತ ಯೋಧರು ಮುಂತಾದವರಿಗೆ ಶುಲ್ಕದಲ್ಲಿ ಶೇ 60ರಷ್ಟು ರಿಯಾಯಿತಿ ಇದೆ.

ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸೈಬರ್ ಸೆಕ್ಯೂರಿಟಿ ಆಫೀಸರ್, ಇನ್‌ಫರ್‌ಮೇಶನ್ ಆಫೀಸರ್, ಇನ್‌ಫರ್‌ಮೇಶನ್ ಅನಾಲಿಸ್ಟ್, ಐಟಿ ಸೆಕ್ಯೂರಿಟಿ ಇಂಜಿನಿಯರ್, ಸಿಸ್ಟಮ್ ಸೆಕ್ಯೂರಿಟಿ ಅಡೈಸ್ವರ್, ಇನ್‌ಫರ್‌ಮೇಶನ್ ರಿಸ್ಕ್ ಆಡಿಟರ್, ಸೆಕ್ಯೂರಿಟಿ ಅನಾಲಿಸ್ಟ್ ಮುಂತಾದ ಹುದ್ದೆಗಳಲ್ಲಿ ಕೆಲಸ ನಿರ್ವಹಣೆ ಮಾಡಬಹುದು.

ಆಸಕ್ತರು ಅರ್ಜಿಗಳನ್ನು www.nacsindia.org ವೆಬ್‌ಸೈಟ್ ಮೂಲಕ 27/6/2021ರ ತನಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7893141797.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+