• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಳ್ಳಾರಿಯಲ್ಲಿ ಸಂಪನ್ಮೂಲ ವ್ಯಕ್ತಿ ಹುದ್ದೆ ಭರ್ತಿ; ಆಸಕ್ತರು ಅರ್ಜಿ ಹಾಕಿ

|
Google Oneindia Kannada News

ಬಳ್ಳಾರಿ, ಆಗಸ್ಟ್ 25; ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ರಾಜ್ಯ ಸಂಪನ್ಮೂಲ ಕೇಂದ್ರ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿರುವ ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ.

ಒಂದು ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎನ್‌ಟಿಪಿಸಿ ನೇಮಕಾತಿ; 47 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ ಎನ್‌ಟಿಪಿಸಿ ನೇಮಕಾತಿ; 47 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ಯಾವುದಾದರೂ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು, ಎಂ. ಎಸ್. ಡಬ್ಲ್ಯೂ. ಎಂಎ, ಮಹಿಳಾ ಅಧ್ಯಯನ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗೆ ಆದ್ಯತೆ ನಿಡಲಾಗುತ್ತದೆ.

ಚಿಕ್ಕಮಗಳೂರಲ್ಲಿ ಕೆಲಸ ಖಾಲಿ ಇದೆ; ಸೆಪ್ಟೆಂಬರ್ 6ರೊಳಗೆ ಅರ್ಜಿ ಹಾಕಿ ಚಿಕ್ಕಮಗಳೂರಲ್ಲಿ ಕೆಲಸ ಖಾಲಿ ಇದೆ; ಸೆಪ್ಟೆಂಬರ್ 6ರೊಳಗೆ ಅರ್ಜಿ ಹಾಕಿ

ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಟ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು, ಅನುಭವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಅಭ್ಯರ್ಥಿಯು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಲು ದೈಹಿಕ ಸಾಮರ್ಥ್ಯ ಹೊಂದಿರಬೇಕು.

ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಆಗಸ್ಟ್ 28ರೊಳಗೆ ಅರ್ಜಿ ಹಾಕಿ ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಆಗಸ್ಟ್ 28ರೊಳಗೆ ಅರ್ಜಿ ಹಾಕಿ

ಅಭ್ಯರ್ಥಿಗಳು ಅರ್ಜಿಗಳನ್ನು ಉಪನಿರ್ದೇಶಕ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಎಸ್. ಪಿ. ಸರ್ಕಲ್ ದೇವಿನಗರ ಬಳ್ಳಾರಿ ಕಚೇರಿಯಲ್ಲಿ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08392-294127, 9110653738 ಕರೆ ಮಾಡಬಹುದಾಗಿದೆ.

ಅರ್ಜಿ ಆಹ್ವಾನ; ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಉದ್ಯೋಗಿನಿ, ಕಿರುಸಾಲ, ಸಮೃದ್ಧಿ ಯೋಜನೆಯಡಿಯಲ್ಲಿ ಅರ್ಜಿ ಅಹ್ವಾನಿಸಲಾಗಿದೆ.

ಬಿದಿಬದಿ ವ್ಯಾಪಾರ, ಹೈನುಗಾರಿಕೆ, ಕಿರಾಣಿ ಅಂಗಡಿ, ಹೋಲಿಗೆ ಯೊಜನೆ, ಗುಡಿ ಕೈಗಾರಿಕೆ, ಸ್ತ್ರೀಶಕ್ತಿ ಯೋಜನೆಯಡಿ ನೋಂದಣಿಯಾದ ಅರ್ಹ ಸ್ತ್ರೀಶಕ್ತಿ ಗುಂಪುಗಳು ಶಿಶು ಅಭಿವೃದ್ಧಿ ಉಪಯೋಜನೆಗಳಡಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ 18 ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 6 ಸಂಜೆ 5ರೊಳಗೆ ಇದೇ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08391-220240 ಸಂಪರ್ಕಿಸಬಹುದು.

ಫೋಟೋಗ್ರಫಿ, ತರಬೇತಿಗೆ ಅರ್ಜಿ ಆಹ್ವಾನ; ಬಳ್ಳಾರಿ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CB RSETI) ವತಿಯಿಂದ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಉಚಿತ ತರಬೇತಿಯನ್ನು ಆಗಸ್ಟ್ 30 ರಿಂದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (CB RSETI)ಯ ಆವರಣದಲ್ಲಿ ನಡೆಯಲಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶದ 20 ರಿಂದ 45 ವಯೋಮಿತಿಯೊಳಗಿನ ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ಊಟ, ವಸತಿಯೊಂದಿಗೆ ಕೌಶಲ್ಯ, ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಾಸನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಲಾಗುವುದು.

ಈ ಕ್ಷೇತ್ರದಲ್ಲಿ ಪ್ರಾಥಮಿಕ ಜ್ಞಾನ ಹೊಂದಿರಬೇಕು, ಬಿಪಿಎಲ್ ಕಾರ್ಡ್ ಹೊಂದಿದ್ದು ಕನ್ನಡವನ್ನು ಓದಲು ಹಾಗೂ ಬರೆಯಲು ಬರುವಂತಹ ನಿರುದ್ಯೋಗಿ ಸ್ವ-ಉದ್ಯೋಗ ಆಕಾಂಕ್ಷಿಗಳು ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವವರು ಎಸ್‌. ಎಸ್‌. ಎಲ್‌. ಸಿ ಪಾಸಾಗಿದ್ದು ಫೋಟೋಗ್ರಾಫಿ ಮತ್ತು ವೀಡಿಯೋಗ್ರಫಿ ಬಗ್ಗೆ ಪ್ರಾಥಮಿಕ ಅನುಭವ ಹೊಂದಿರಬೇಕು. ಸಂದರ್ಶನ ಮುಖಾಂತರ 25 ಜನರನ್ನು ಮಾತ್ರ ಆಯ್ಕೆ ಮಾಡಲಾಗುವುದು. ಸಂಸ್ಥೆಯಲ್ಲಿ ಈ ಮೊದಲು ತರಬೇತಿ ಪಡೆದವರು ಪುನಃ ತರಬೇತಿ ಪಡೆಯಲು ಅರ್ಹರಲ್ಲ.

ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿ, ಸಂಬಂಧಿಸಿದ ವಿಷಯದಲ್ಲಿ ಇರುವ ಪ್ರಾಥಮಿಕ ಜ್ಞಾನ, ಅನುಭವ ಮುಂತಾದ ಮಾಹಿತಿಯೊಂದಿಗೆ ಬಿಳಿ ಹಾಳೆಯ ಮೇಲೆ ಅರ್ಜಿಯನ್ನು ಬರೆದು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಚ್ಚಿ, ರೇಷನ್ ಕಾರ್ಡಿನ ಒಂದು ಝೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಅರ್ಜಿಯನ್ನು ಆಗಸ್ಟ್ 28ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08392-244117.

English summary
Apply for resource person post at Ballari women self employment guidance center. Candidates can submit applications till August 25, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X