ಕಲಬುರಗಿ; ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಕಲಬುರಗಿ, ಏಪ್ರಿಲ್ 4; ಸೇಡಂ ತಾಲೂಕಿನ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 10ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಸಮಾಜ ಕಲ್ಯಾಣ ಇಲಾಖೆ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ವ್ಯಾಪ್ತಿಯಲ್ಲಿ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಖಾಲಿಯಿರುವ ಸಮಾಜ ವಿಜ್ಞಾನ (ಆಂಗ್ಲ ಮಾಧ್ಯಮ) ಅತಿಥಿ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.
ಅರ್ಜಿಗಳನ್ನು ಸಲ್ಲಿಸುವವರು ಬಿ.ಎ. ಬಿ.ಇಡಿ. ಪಾಸಾಗಿರಬೇಕು. ಶಿಕ್ಷಕರನ್ನು ಗೌರವಧನದ ಆಧಾರದ ಮೇಲೆ ಶಾಲಾ ಹಂತದಲ್ಲಿ ನಿಯಮಾವಳಿಗೆ ಒಳಪಟ್ಟು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಹರು ಲಭ್ಯವಿಲ್ಲದಿದ್ದಲ್ಲಿ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ಸಂಬಂಧಟಪಟ್ಟ ಶೈಕ್ಷಣಿಕ ದಾಖಲೆಗಳೊಂದಿಗೆ 2021ರ ಏಪ್ರಿಲ್ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೋಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 8747924789.
ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ; ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ 'ಗ್ರಾಮ ಕಾಯಕ ಮಿತ್ರ' ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮ ಕಾಯಕ ಮಿತ್ರರಿಗೆ ಮಾಸಿಕ 6,000 ರೂ.ಗಳ ಗೌರವಧನ ನೀಡಲಾಗುತ್ತದೆ. ಅವರ ಕಾರ್ಯನಿರ್ವಹಣೆಯನ್ನು ಆಧರಿಸಿ 5,000 ರೂ.ಗಳ ವರೆಗೆ ಪ್ರೋತ್ಸಾಹ ಧನವನ್ನು ಸಹ ಪಡೆಯಬಹುದಾಗಿದೆ.












Click it and Unblock the Notifications