ಕೋಲಾರ : ಅತಿಥಿ ಶಿಕ್ಷಕ, ಉಪನ್ಯಾಸಕರ ಹುದ್ದೆಗೆ ಅರ್ಜಿ ಹಾಕಿ

ಬೆಂಗಳೂರು, ಮೇ 18 : ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕ ಮತ್ತು ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೇ 27 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

2019-20 ನೇ ಸಾಲಿಗೆ ಮೊರಾರ್ಜಿ ದೇಸಾಯಿ /ಕಿತ್ತೂರು ರಾಣಿ ಚೆನ್ನಮ್ಮ /ಅಟಲ್ ಬಿಹಾರಿ ವಾಜಪೇಯಿ / ಡಾ.ಬಿ.ಆರ್. ಅಂಬೇಡ್ಕರ್ / ಏಕಲವ್ಯ ಮಾದರಿ ಆಂಗ್ಲ ಮಾಧ್ಯಮದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕನ್ನಡ ಭಾಷಾ 22, ಆಂಗ್ಲ ಭಾಷಾ 23, ಹಿಂದಿ ಭಾಷಾ 17, ಗಣಿತ 16, ವಿಜ್ಞಾನ 17, ಸಮಾಜ ವಿಜ್ಞಾನ 14, ದೈಹಿಕ ಶಿಕ್ಷಣ 19, ಕಂಪ್ಯೂಟರ್ ವಿಜ್ಞಾನ 2, ಮತ್ತು ಶುಶ್ರೂಷಕಿ 23 ಅತಿಥಿ ಶಿಕ್ಷಕರ ಹುದ್ದೆಗಳಿವೆ.

jobs

ವಸತಿ ಕಾಲೇಜುಗಳಲ್ಲಿ ಕನ್ನಡ ಭಾಷಾ 1, ಆಂಗ್ಲ ಭಾಷಾ 2, ಭೌತಶಾಸ್ತ್ರ 2, ರಸಾಯನ ಶಾಸ್ತ್ರ 2, ಗಣಿತ 1, ಜೀವಶಾಸ್ತ್ರ 1 ಮತ್ತು ಕಂಪ್ಯೂಟರ್ ವಿಜ್ಞಾನ 3 ಶುಶ್ರೂಷಕಿ 2, ಹುದ್ದೆಗಳ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿಗಳನ್ನು ಅಹ್ವಾನಿಸಿದೆ.

ಅರ್ಜಿಗಳನ್ನು ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೋಲಾರ ಇಲ್ಲಿ ಪಡೆದು 27-05-2019ರ ಸಂಜೆ 5 ಗಂಟೆಯೊಳಗೆ ಇದೇ ಕಛೇರಿಗೆ ಭರ್ತಿ ಮಾಡಿ ಸಲ್ಲಿಸಬೇಕು.

ಪದವಿ ಮತ್ತು ಬಿ.ಎಡ್ ಅಂಕಗಳ ಆಧಾರದಲ್ಲಿ ಮೆರಿಟ್ ಅನ್ವಯ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಪಾಠ ವೀಕ್ಷಣೆಗೆ ಆಯ್ಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+