ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಲ್ಲಿ ಕೆಲಸ ಖಾಲಿ ಇದೆ

ಬೆಂಗಳೂರು, ಆಗಸ್ಟ್ 27: ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಚೀಫ್ ಡೇಟಾ ಆಫೀಸರ್ ಹುದ್ದೆ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 5/9/2020 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Recommended Video

      Accenture 25,000 ಕೆಲಸಕ್ಕೆ ಬೀಳಲಿದೆ ಕತ್ತರಿ ಎಚ್ಚರ!! | Oneindia Kannada

      ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಚೀಫ್ ಡೇಟಾ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವವರು ಡಾಟಾ ಸೈನ್ಸ್/ಕಂಪ್ಯೂಟರ್ ಸೈನ್ಸ್/ಮಾಹಿತಿ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಅಥವ ಸ್ನಾತಕೋತ್ತರ ಪದವಿ ಕೋರ್ಸ್‌ನಲ್ಲಿ ಪರಿಣಿತಿ ಹೊಂದಿರಬೇಕು.

      ಗಣಿತ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವ ಸಂಬಂಧಿತ ಕ್ಷೇತ್ರದಲ್ಲಿ ಅಥವ ಸಮಾನವಾದ ಕೆಲಸದ ಅನುಭವ ಪಡೆದಿರಬೇಕು. ಕನಿಷ್ಠ 10 ವರ್ಷ ಕಾರ್ಯಾನುಭವದಲ್ಲಿ ಐದು ವರ್ಷ ಡಾಟಾ ಸೈನ್ಸ್, ಡಾಟಾ ಇಂಜಿನಿಯರಿಂಗ್, ತಾಂತ್ರಿಕ ಅಥವ ಕಾರ್ಯನಿರ್ವಹಣಾ ತಂಡಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.

       Apply For Chief Data Officer Post AT Bengaluru Smart City Limited

      ಕನಿಷ್ಠ ಎರಡು ವರ್ಷಗಳು, ಹತ್ತಕ್ಕಿಂತ ಹೆಚ್ಚು ಜನವುಳ್ಳ ತಂಡದ ನಿರ್ವಹಣೆಯ ಕೌಶಲ್ಯವಿರಬೇಕು ಮತ್ತು ಕಾರ್ಯ ನಿರ್ವಹಿಸುವ ಬಗ್ಗೆ ಅನುಭವವಿರಬೇಕು. ಹಿರಿಯ ಅಧಿಕಾರಿಗಳೊಂದಿಗೆ ಅತ್ಯುತ್ತಮವಾಗಿ ಸಂವಹನ ಮಾಡುವ ಕೌಶಲ್ಯ ಇರಬೇಕು. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ 60 ವರ್ಷಗಳನ್ನು ಮೀರಿರಬಾರದು.

      ಅಭ್ಯರ್ಥಿಗಳು ಅರ್ಜಿಗಳನ್ನು ಸ್ಟಾಂಡರ್ಡ್ ಸಿವಿ ಫಾರ್ಮಾಟ್ ಜೊತೆ ಅಗತ್ಯ ಅರ್ಹತೆ, ಅನುಭವದ ಪ್ರಮಾಣ ಪತ್ರಗಳ ಜೊತೆ ಇ-ಮೇಲ್ ಕಳಿಸಬೇಕು. 5/9/2020ರ ಸಂಜೆ 5ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.

      [email protected] ವಿಳಾಸಕ್ಕೆ ಇ-ಮೇಲ್ ಕಳಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9902343002 ನಂಬರ್‌ಗೆ ಕರೆ ಮಾಡಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+