ಎಚ್‌ಎಎಲ್‌ನಲ್ಲಿ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಮೇ 22 : ಎಚ್‌.ಎ.ಎಲ್‌ನಲ್ಲಿ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜೂನ್ 5 ಅಂತಿಮ ದಿನವಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಎಚ್‌.ಎ.ಎಲ್‌.ನಲ್ಲಿ ಮೂರು ವರ್ಷಗಳ ಸಿ.ಎನ್.ಸಿ ಪ್ರೋಗ್ರಾಮರ್ ಕಮ್ ಆಪರೇಟರ್ ಟ್ರೇಡ್ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯ ಅವಧಿ 15 ತಿಂಗಳು. ತರಬೇತಿ ಉಚಿತವಾಗಿದೆ.
ತರಬೇತಿಯ ಅವಧಿಯಲ್ಲಿ ಶಿಷ್ಯ ವೇತನ ನೀಡಲಾಗುವುದು. ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಕಡು ಬಡತನದಲ್ಲಿರುವ (ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ) ಎಸ್.ಎಸ್.ಎಲ್.ಸಿಯಲ್ಲಿ ಶೇಕಡ 60% ಅಂಕಗಳಿಸಿರುವ ಸಾಮಾನ್ಯ ಅಭ್ಯರ್ಥಿಗಳಿಗೆ, ಶೇಕಡ 50% ಅಂಕ ಪಡೆದ ಪರಿಶಿಷ್ಟ ಜಾತಿ/ಪಂಗಡ/ಅಂಗವಿಕಲ/ಸೇನಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Apply for apprenticeships in HAL, Bengaluru

ಅರ್ಜಿ ಸಲ್ಲಿಸುವವರಿಗೆ ವಯೋಮಿತಿ ಜೂ.1 ಕ್ಕೆ 15 ರಿಂದ 18 ವರ್ಷವಾಗಿರಬೇಕು. ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಉಚಿತ ವಸತಿ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಜೂನ್ 5 ಅಂತಿಮ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ವಿಳಾಸ : ಟೆಕ್ನಿಕಲ್ ಟ್ರೈನಿಂಗ್ ಇನ್ಸ್‌ಟ್ಯೂಟ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ವಿಮಾನಪುರ ಪೋಸ್ಟ್, ಬೆಂಗಳೂರು-560017.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+